ಕಾಸರಗೋಡು: ಜಮೀನು ಬದಲಾವಣೆ ಅರ್ಜಿಗಳನ್ನು ತ್ವರಿತವಾಗಿ ಪರಿಹರಿಸುವ ಸಲುವಾಗಿ ಜನವರಿ 20 ರಂದು ಮಧ್ಯಾಹ್ನ 2:ಕ್ಕೆ ಕಂದಾಯ ಇಲಾಖೆ ಸಚಿವ ಕೆ.ರಾಜನ್ ಅವರ ನೇತೃತ್ವದಲ್ಲಿ ಕಾಞಂಗಾಡ್ ಬ್ಲಾಕ್ ಪಂಚಾಯತಿ ಸಭಾಂಗಣದಲ್ಲಿ ಅದಾಲತ್ ಆಯೋಜಿಸಲಾಗಿದೆ. ಅದಾಲತ್ ನ ಯಶಸ್ವಿ ನಿರ್ವಹಣೆಗಾಗಿ ಕಾಞಂಗಾಡು ಸಬ್ ಕಲೆಕ್ಟರ್ ಸುಫಿಯಾನ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ಸಂಘಟನಾ ಸಮಿತಿಯನ್ನು ರಚಿಸಲಾಯಿತು.
ಉದುಮ ಶಾಸಕ ಇ.ಚಂದ್ರಶೇಖರನ್ ಸಭೆಯನ್ನು ಉದ್ಘಾಟಿಸಿದರು. ಪಂಚಾಯಿತಿ ಅಧ್ಯಕ್ಷರು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತಿತರರು ಭಾಗವಹಿಸಿದ್ದರು. ಸಂಘಟನಾ ಸಮಿತಿ ಅಧ್ಯಕ್ಷರಾಗಿ ಶಾಸಕ ಇ.ಚಂದ್ರಶೇಖರನ್, ಸಂಚಾಲಕರಾಗಿ ಸಬ್ ಕಲೆಕ್ಟರ್ ಸುಫಿಯಾನ್ ಅಹಮದ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸದಸ್ಯರನ್ನೊಳಗೊಂಡ 10 ಸದಸ್ಯರ ಸಂಘಟನಾ ಸಮಿತಿಯನ್ನು ರಚಿಸಲಾಯಿತು.
ಕಳೆದ ಡಿ. 31 ರವರೆಗೆ ಆನ್‍ಲೈನ್‍ನಲ್ಲಿ ಸ್ವೀಕರಿಸಿದ ಉಚಿತ ಜಮೀನು ದಾಖಲೆ ಬದಲಾವಣೆಗೆ ಅರ್ಹವಾದ ಅರ್ಜಿಗಳನ್ನು ಅದಾಲತ್ ನಲ್ಲಿ ಪರಿಗಣಿಸಲಾಗುತ್ತದೆ. ಅರ್ಜಿಯನ್ನು ಅಂಗೀಕರಿಸಿದಾಗ, ಅರ್ಜಿದಾರರು ಅರ್ಜಿಯೊಂದಿಗೆ ಸಲ್ಲಿಸಿದ ಮೊಬೈಲ್ ಸಂಖ್ಯೆಗೆ ಟೋಕನ್ ಸಂಖ್ಯೆಯೊಂದಿಗೆ ಒಟಿಪಿ ಸಂದೇಶವನ್ನು ಕಳುಹಿಸಲಾಗುತ್ತದೆ. ಅಕ್ಷಯ ಕೇಂದ್ರಗಳ ಸಂಖ್ಯೆಗಳನ್ನು ಅರ್ಜಿಯಲ್ಲಿ ಸೇರಿಸಿದರೆ, ಆ ಸಂಖ್ಯೆಗೆ ಸಂದೇಶ ಹೋಗುತ್ತದೆ. ಅರ್ಜಿದಾರರು ಅಕ್ಷಯ ಕೇಂದ್ರಗಳಿಂದ ಸಂದೇಶದಲ್ಲಿರುವ ಟೋಕನ್ ಸಂಖ್ಯೆಯನ್ನು ಪಡೆದು ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಬಂದ ಸಂದೇಶವನ್ನು ಪ್ರಸ್ತುತಪಡಿಸುವ ಮೂಲಕ ಅದಾಲಂಗೆ ಹಾಜರಾಗಬಹುದು ಮತ್ತು ಆದೇಶಗಳನ್ನು ಪಡೆಯಬಹುದು.
ಜನವರಿ 20 ರಂದು ಬೆಳಿಗ್ಗೆ 10 ಕ್ಕೆ ಕಾಸರಗೋಡು ಕಲೆಕ್ಟರೇಟ್ ಕಾನ್ಫರೆನ್ಸ್ ಹಾಲ್‍ನಲ್ಲಿ ನಡೆಯುವ ಭೂ ಬದಲಾವಣೆ ಅದಾಲತ್‍ನಲ್ಲಿ ಸಚಿವರು ಭಾಗವಹಿಸುವರು.