ಇಂಫಾಲ: ವಿದ್ಯುತ್ ಕೇಂದ್ರವೊಂದರಿಂದ ಭಾರೀ ಪ್ರಮಾಣದ ಉಳಿಕೆ ಇಂಧನ (heavy fuel) ಸೋರಿಕೆಯಾಗಿ ನದಿಗೆ ಹರಿದುಹೋಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇಂಫಾಲ: ವಿದ್ಯುತ್ ಕೇಂದ್ರವೊಂದರಿಂದ ಭಾರೀ ಪ್ರಮಾಣದ ಉಳಿಕೆ ಇಂಧನ (heavy fuel) ಸೋರಿಕೆಯಾಗಿ ನದಿಗೆ ಹರಿದುಹೋಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಾಂಗ್‌ಪೋಕ್ಪಿ ಜಿಲ್ಲೆಯ ಲೀಮಾಖೋಂಗ್ ವಿದ್ಯುತ್ ಕೇಂದ್ರದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.
'ನದಿಗಳು ಗ್ರಾಮಗಳ ಜೀವನಾಡಿಯಾಗಿವೆ. ದಿನ ನಿತ್ಯದ ಕೆಲಸಗಳಿಗೆ ನದಿಯ ನೀರನ್ನೇ ಬಳಸುತ್ತಿದ್ದೇವೆ. ಇಂಧನ ಸೋರಿಕೆಯಾದಾಗಿನಿಂದ ಗ್ರಾಮಸ್ಥರಲ್ಲಿ ಭಯ ಮೂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಕೊಡಬೇಕಿದೆ' ಎಂದು ಕಾಂಟೊ ಸಬಲ್ ನಿವಾಸಿ ನೊಂಗ್ಮಾಯಿ ತಿಳಿಸಿದ್ದಾರೆ.
ಇಂಧನ ನದಿಗಳಿಗೆ ಹರಿಯದಂತೆ ತಡೆಯಲು ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಮುಖ್ಯಮಂತ್ರಿ ಕಚೇರಿ ನಿರ್ದೇಶನ ನೀಡಿದೆ.
ಘಟನೆಯ ಹಿಂದೆ ಕಿಡಿಗೇಡಿಗಳ ಕೈವಾಡವಿದೆಯೇ? ಅಥವಾ ಆಕಸ್ಮಿಕವಾಗಿ ನಡೆದಿದೆಯೇ? ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.