HEALTH TIPS

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುವ ಕನ್ನಡದ ಯಾವುದೇ ಅವಕಾಶಗಳಿಂದ ನಮ್ಮ ಮಕ್ಕಳು ವಂಚಿತರಾಗಲು ನಾವು ಬಿಡುವುದಿಲ್ಲ: ಸತ್ಯನಾರಾಯಣ ಶರ್ಮ

               ಬದಿಯಡ್ಕ: ರಂಗಚಿನ್ನಾರಿ ಕಾಸರಗೋಡು ಇದರ ಸಂಗೀತ ಘಟಕ ಸ್ವರಾಚಿನ್ನಾರಿಯ ಸರಣಿ ಕಾರ್ಯಕ್ರಮದ ನಾಲ್ಕನೇ ಹಂತವಾಗಿ ‘ಕನ್ನಡ ಧ್ವನಿ ‘ ಕನ್ನಡ ನಾಡಗೀತೆ ಭಾವಗೀತೆಗಳ ಕಲಿಕಾ ಶಿಬಿರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ 5,6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ ಮಂಗಳವಾರ  ಬೆಳಿಗ್ಗೆ 10 ರಿಂದ  12.30 ವರೆಗೆ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

          ಈ ಸಂದರ್ಭ ಪ್ರಾಸ್ತಾವಿಕವಾಗಿ ಮಾತನಾಡಿದ ರಂಗಚಿನ್ನಾರಿಯ ನಿರ್ದೇಶಕರಲ್ಲಿ ಒಬ್ಬರಾದ ಕೋಳಾರು ಸತೀಶ್ಚಂದ್ರ ಭಂಡಾರಿ ಅವರು,  ತಮ್ಮ ಬಾಲ್ಯದ ಗೆಳೆತನವನ್ನು ನೆನಪಿಸಿ,   ನಾಲ್ಕು ಜನರ ಗೆಳೆತನ ರಂಗಚಿನ್ನಾರಿ ಎಂಬ ಪ್ರತಿಷ್ಠಿತ ಸಂಸ್ಥೆಯನ್ನು ಹುಟ್ಟು ಹಾಕಿ, ಕನ್ನಡದ ಉಳಿವಿನ ಹಾಗೂ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆಗಳನ್ನು ರೂಪಿಸಿ ಕೊಡುವ ಸದುದ್ದೇಶದಿಂದ , ಸಂಸ್ಥೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕಲಿಕೆ ಎಂಬುದನ್ನು ವಿದ್ಯೆ ಮತ್ತು ಪ್ರತಿಭೆ ಎರಡಕ್ಕೂ ಸಮಾನ ರೀತಿಯಲ್ಲಿ ಹಂಚುತ್ತಾ ಜೀವನದಲ್ಲಿ ಸಾಧನೆಯತ್ತ ಸಾಗಬೇಕು ಎಂಬ ಕಿವಿಮಾತನ್ನು ಮಕ್ಕಳಿಗೆ ತಿಳಿಸಿದರು.


            ರಂಗಚಿನ್ನಾರಿ ಮತ್ತು ಭಾರತೀ ವಿದ್ಯಾಪೀಠ ಶಾಲೆಯ ಸಂಬಂಧ ತುಂಬಾ ಗಟ್ಟಿಯಾದುದು, ರಂಗಚಿನ್ನಾರಿ ನಿರ್ದೇಶಕರಲ್ಲಿ ಒಬ್ಬರಾದ ಕಾಸರಗೋಡು ಚಿನ್ನಾ ಅವರ ನೇತೃತ್ವದ ಕನ್ನಡದ ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಯಶಸ್ವಿಯಾಗುವುದು ಖಚಿತ ಮತ್ತು ತಮ್ಮ ಶಾಲಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುವ ಕನ್ನಡದ ಯಾವುದೇ ಅವಕಾಶಗಳಿಂದ ಮಕ್ಕಳನ್ನು ವಂಚಿತರಾಗಲು ಬಿಡುವುದಿಲ್ಲ ಮತ್ತು ಈ ನಿಟ್ಟಿನಲ್ಲಿ ಸ್ವರಚಿನ್ನಾರಿಯ ಸಂಗೀತ ಕಾರ್ಯಗಳನ್ನು ಪ್ರಶಂಸಿಸಿ ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಅಧ್ಯಕ್ಷೀಯ ಭಾಷಣ ಮಾಡಿದರು.  


       ಶಿಬಿರ ನಿರ್ದೇಶಕರಾದ  ಪ್ರತಿಜ್ಞಾ ರಂಜಿತ್ ಮತ್ತು ಅಕ್ಷತಾ ಪ್ರಕಾಶ್ ಉಪಸ್ಥಿತರಿದ್ದು ಸುಮಾರು 75 ಮಕ್ಕಳಿಗೆ ಕನ್ನಡ ನಾಡಗೀತೆ ಮತ್ತು ಭಾವಗೀತೆಯನ್ನು ಹಾಡಲು ತರಬೇತಿ ನೀಡಿದರು. ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿಯರು ಅವನಿ, ಪ್ರಕೃತಿ ,ಸ್ತುತಿ, ದಶಮಿ, ವಿಸ್ಮಯ ಪ್ರಾರ್ಥನೆ ಮಾಡಿದರು. ಏಳನೇ ತರಗತಿಯ ವಿದ್ಯಾರ್ಥಿನಿ ತಸ್ವಿ ಸ್ವಾಗತಿಸಿ, ವರ್ಷಿತ್ ವಂದಿಸಿದರು. ಸರಳ ಸುದ್ದಿ ಯ ಪತ್ರಕರ್ತರು ಛಾಯಾಗ್ರಾಹಕರು ಮತ್ತು ಶಾಲಾ ಶಿಕ್ಷಕ ವೃಂದ ಶಿಬಿರದ ಉದ್ದಕ್ಕೂ ಇದ್ದು ಉತ್ತಮ ರೀತಿಯಲ್ಲಿ ಸಹಕರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries