ಮಂಗಳೂರು: ಇತ್ತೀಚೆಗಷ್ಟೇ ನಟ ರಿಷಬ್ ಶೆಟ್ಟಿ ಅಭಿನಯದ ಕಾಂತಾರ: ಎ ಲೆಜೆಂಡ್ ಭಾಗ 1ರ ಸಿನಿಮಾ ಸೆಟ್ಟೇರಿದ್ದು, ಸಿನಿಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿದೆ. ಚಿತ್ರದ ಚಿತ್ರೀಕರಣ ಆರಂಭಗೊಂಡಿದ್ದು, ರಿಷಬ್ ತೀರಾ ಎಚ್ಚರಿಕೆ ವಹಿಸಿ ಚಿತ್ರ ತೆರೆ ಮೇಲೆ ತರಲು ಚಿಂತನೆ ನಡೆಸುತ್ತಿದ್ದಾರೆ.

ಹೀಗಿರುವಾಗ ರಿಷಬ್ ಇಂತಹ ಬ್ಯುಸಿ ಶೆಡ್ಯೂಲ್ ನಡುವೆಯೂ ಮಂಗಳೂರಿನ ವಜ್ರದೇಹಿ ಮಠದ ಮೈಸಂದಾಯ ಕೋಲದಲ್ಲಿ ಭಾಗಿಯಾಗಿದ್ದು, ರಿಷಬ್ ಭೇಟಿ ಹಿಂದಿನ ಕಾರಣ ಏನಿರಬಹುದು ಎಂದು ಸದ್ಯ ಸಿನಿಪ್ರಿಯರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಕೋಲದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ರಿಷಬ್ಗೆ ಕಾಂತಾರ ರೀತಿಯಲ್ಲೇ ದೈವ ಅಭಯ ನೀಡಿದೆ. ಹೌದು, ಕಾಂತಾರ ಗೆಲುವಿಗಾಗಿ ದೈವದ ಮುಂದೆ ತಲೆಬಾಗಿ ರಿಷಬ್ ಪ್ರಾರ್ಥನೆ ಸಲ್ಲಿಸಿದ್ದಾರೆ. ಆಗ ರಿಷಬ್ ಶೆಟ್ಟಿಗೆ 'ಧೈರ್ಯ ಕಳೆದುಕೊಳ್ಳದಂತೆ, ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡಿ, ಹಿಂದೆ ನಾನಿದ್ದೇನೆ' ಎಂದು ದೈವದ ಅಭಯ ಸಿಕ್ಕಿದೆ.
ಸದ್ಯ 'ಕಾಂತಾರ: ಚಾಪ್ಟರ್ 1' ಸಂದರ್ಭದಲ್ಲೂ ದೈವದಿಂದ ಧನಾತ್ಮಕ ಪ್ರಕ್ರಿಯೆ ಸಿಕ್ಕಿರುವುದರಿಂದ ರಿಷಬ್ ಶೆಟ್ಟಿ ಫುಲ್ ಖುಷ್ ಆಗಿದ್ದಾರೆ. ಮೈಸಂದಾಯ ದೈವದ ಮುಂದೆ ರಿಷಬ್ ಶೆಟ್ಟಿ ತಲೆಭಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೆಲ್ಲಾ ನೋಡಿದರೆ ಕಾಂತಾರಕ್ಕಾಗಿ ಮತ್ತೆ ದೈವ ಪ್ರೇರಣೆ ಪಡೆಯಲು ರಿಷಬ್ ಗೆ ಮುನ್ಸೂಚನೆ ಸಿಕ್ತಾ ಎಂಬ ಪ್ರಶ್ನೆ ಮೂಡಿದೆ. ಈ ಹಿಂದೆ ರಿಷಬ್ ಕಾಂತಾರ ಹಿನ್ನಲೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದಿದ್ದರು.
'ಕಾಂತಾರ: ಚಾಪ್ಟರ್ 1' ಚಿತ್ರವನ್ನು ರಿಷಬ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಪಂಜಾಬಿ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.