ನವದೆಹಲಿ: ಉಕ್ರೇನ್‌ನಲ್ಲಿ ಭಾರತ ಮೂಲದ ಕೆಲವೊಂದು ಶೆಲ್‌ಗಳು ಪತ್ತೆಯಾಗಿವೆ ಎಂಬ ವರದಿಯನ್ನು ಭಾರತೀಯ ವಿದೇಶಾಂಗ ಸಚಿವಾಲಯ ಗುರುವಾರ ತಳ್ಳಿಹಾಕಿದೆ. ಉಕ್ರೇನ್‌ಗೆ ಭಾರತವು ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಕುರಿತು ಮಾಹಿತಿ ನೀಡಿ, 'ನವದೆಹಲಿಯು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆಯನ್ನೂ ಮಾಡಿಲ್ಲ, ರಫ್ತು ಕೂಡಾ ಮಾಡಿಲ್ಲ.
'ಉಕ್ರೇನ್ ಮತ್ತು ರಷ್ಯಾ ನಡುವಿನ ಬಿಕ್ಕಟ್ಟು ಮಾತುಕತೆ ಹಾಗೂ ರಾಜತಾಂತ್ರಿಕ ಚರ್ಚೆಯ ಮೂಲಕ ಬಗೆಹರಿಯಬೇಕಿದೆ. ಸದ್ಯ ಉಕ್ರೇನ್‌ನಲ್ಲಿ ತಲೆದೋರಿರುವ ಕೀವ್‌ನ ಶಾಂತಿ ಸೂತ್ರ ಮತ್ತು ಉನ್ನತ ದ್ವಿಪಕ್ಷೀಯ ಒಪ್ಪಂದದ ಮಾರ್ಗೋಪಾಯ ಕುರಿತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಉಕ್ರೇನ್ ಸಚಿವರೊಂದಿಗೆ ಬುಧವಾರ ಮಾತುಕತೆ ನಡೆಸಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ಜೈಶಂಕರ್ ಅವರು ಐದು ದಿನಗಳ ರಷ್ಯಾ ಭೇಟಿ ಕೈಗೊಂಡಿದ್ದರು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಹ್ವಾನದಂತೆ ಅಲ್ಲಿನ ವಿದೇಶಾಂಗ ಸಚಿವ ಸರ್ಗೀ ಲ್ಯಾವ್ರೊ ಜತೆ ಸತತ ಮಾತುಕತೆ ನಡೆಸಿದ್ದರು.
ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರೊಂದಿಗೆ ನಡೆಸಿದ ಫೋನ್ ಸಂಭಾಷಣೆ ಫಲಪ್ರದವಾಗಿದೆ. ಶಾಂತಿ ಸೂತ್ರ ಮತ್ತು ಜಾಗತಿಕ ಶಾಂತಿ ಸಮಾವೇಶ ಕುರಿತು ಉಕ್ರೇನ್ ತನ್ನ ಯೋಜನೆಯನ್ನು ಕುಲೆಬಾ ವಿವರಿಸಿದ್ದಾರೆ ಎಂದು ಜೈಶಂಕರ್ ಹೇಳಿದ್ದಾರೆ.
ಶೀಘ್ರದಲ್ಲಿ ಭಾರತ-ಉಕ್ರೇನ್ ಸರ್ಕಾರ ಮಟ್ಟದ ಸಮಿತಿಯ ಸಭೆ ನಡೆಸಲು ಉಭಯ ನಾಯಕರು ಒಪ್ಪಿದರು. ಎರಡು ದೇಶಗಳ ಕೊನೆಯ ಸಭೆ 2018ರಲ್ಲಿ ನಡೆದಿತ್ತು.