ಜೊತೆಗೆ ಅಸ್ತಿತ್ವದಲ್ಲಿರುವ ಪರೀಕ್ಷೆಗಳ ಜೊತೆಗೆ ಹೆಚ್ಚುವರಿ ಪರೀಕ್ಷೆಗಳನ್ನು ಪರಿಚಯಿಸಿದೆ ಮತ್ತು ಪ್ರತಿ ಸಿಬ್ಬಂದಿಯು ಸೇನಾ ದೈಹಿಕ ಕ್ಷಮತೆ ಮೌಲ್ಯಮಾಪನ ಕಾರ್ಡ್ (ಎಪಿಎಸಿ) ನಿರ್ವಹಿಸುವುದನ್ನು ಅಗತ್ಯವಾಗಿಸಿದೆ ಎಂದು indianexpress.com ವರದಿ ಮಾಡಿದೆ.
ಹಿಂದಿನ ವ್ಯವಸ್ಥೆಯಲ್ಲಿ ಕಮಾಂಡಿಂಗ್ ಅಧಿಕಾರಿ ತ್ರೈಮಾಸಿಕ ಪರೀಕ್ಷೆಗಳನ್ನು ನಿರ್ವಹಿಸುತ್ತಿದ್ದರು ಮತ್ತು ಪ್ರತಿ ಸಿಬ್ಬಂದಿ ಎಪಿಎಸಿಯನ್ನು ಹೊಂದಿರುತ್ತಿದ್ದರು. ಇತ್ತೀಚಿನ ಬದಲಾವಣೆಯು ಕಮಾಂಡಿಂಗ್ ಆಫೀಸರ್ ಬದಲು ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿಯನ್ನು ಈ ಕಾರ್ಯಕ್ಕೆ ನಿಯೋಜಿಸಿದೆ.
ನೂತನ ನೀತಿಯು ಪರೀಕ್ಷಾ ಪ್ರಕ್ರಿಯೆಯಲ್ಲಿ ಏಕರೂಪತೆಯನ್ನು ತರುವ, ಅಧಿಕಾರಿಗಳಲ್ಲಿ ದೈಹಿಕ ಕ್ಷಮತೆ ಕುಸಿತ ಅಥವಾ ಬೊಜ್ಜು ಮತ್ತು ಜೀವನಶೈಲಿ ಕಾಯಿಲೆಗಳು ಹೆಚ್ಚುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಗುರಿಯನ್ನು ಹೊಂದಿದೆ ಎಂದು ಸೇನಾಮೂಲಗಳು ತಿಳಿಸಿವೆ.
ಪ್ರಸ್ತುತ ರೂಢಿಯಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಯುದ್ಧ ದೈಹಿಕ ಕ್ಷಮತೆ ಪರೀಕ್ಷೆ (ಬಿಪಿಇಟಿ) ಮತ್ತು ದೈಹಿಕ ಕ್ಷಮತೆ ಪರೀಕ್ಷೆ (ಪಿಪಿಟಿ)ಯನ್ನು ನಡೆಸಲಾಗುತ್ತಿದ್ದು,ಇವು ಹಲವಾರು ದೈಹಿಕ ಕಸರತ್ತುಗಳನ್ನು ಒಳಗೊಂಡಿವೆ. ಫಲಿತಾಂಶಗಳನ್ನು ವಾರ್ಷಿಕ ಗೌಪ್ಯ ವರದಿಯಲ್ಲಿ ವಾರ್ಷಿಕ ಆಧಾರದಲ್ಲಿ ಸೇರಿಸಲಾಗುತ್ತದೆ ಮತ್ತು ಈ ವರದಿಗಳನ್ನು ಕಮಾಂಡಿಂಗ್ ಆಫೀಸರ್ ನಿರ್ವಹಿಸುತ್ತಾರೆ.
ನೂತನ ಮಾರ್ಗಸೂಚಿಗಳಡಿ ಬ್ರಿಗೇಡಿಯರ್ ಶ್ರೇಣಿಯವರೆಗಿನ ಸೇನಾಧಿಕಾರಿಗಳು ಅಧಿಕಾರಿಗಳ ಮಂಡಳಿಯ ಮುಖ್ಯಸ್ಥರಾಗಿರುತ್ತಾರೆ. ಇಬ್ಬರು ಕರ್ನಲ್‌ಗಳು ಮತ್ತು ವೈದ್ಯಾಧಿಕಾರಿಯ ಜೊತೆ ಕನಿಷ್ಠ ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ತ್ರೈಮಾಸಿಕ ಪರೀಕ್ಷೆಗಳು ನಡೆಯುತ್ತವೆ.
ಅಸ್ತಿತ್ವದಲ್ಲಿರುವ ತ್ರೈಮಾಸಿಕ ಪರೀಕ್ಷೆಗಳಿಗೆ ವಾರ್ಷಿಕ 50 ಮೀ.ಈಜು ಪ್ರವೀಣತೆ ಪರೀಕ್ಷೆಯೊಂದಿಗೆ 10 ಕಿ.ಮೀ. ಸ್ಪೀಡ್ ಮಾರ್ಚ್ ಮತ್ತು 32 ಕಿ.ಮೀ.ರೂಟ್ ಮಾರ್ಚ್ ಅನ್ನು ಸೇರಿಸಲಾಗಿದೆ.
ನೂತನ ಮಾರ್ಗಸೂಚಿಗಳಂತೆ ದೈಹಿಕ ಮಾನದಂಡಗಳನ್ನು ಪೂರೈಸಲು ವಿಫಲಗೊಳ್ಳುವ ಮತ್ತು 'ಅಧಿಕ ತೂಕ 'ದ ವರ್ಗಕ್ಕೆ ಸೇರುವವರಿಗೆ ಲಿಖಿತ ಸಲಹೆಯನ್ನು ನೀಡಲಾಗುತ್ತದೆ,ನಂತರ ದೈಹಿಕ ಕ್ಷಮತೆಯನ್ನು ಸುಧಾರಿಸಿಕೊಳ್ಳಲು 30 ದಿನಗಳ ಸಮಯಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ರಜೆ ಮತ್ತು ಟಿಡಿ ಕೋರ್ಸ್‌ಗಳನ್ನು ಮೊಟಕುಗೊಳಿಸಲಾಗುತ್ತದೆ.
ಮೌಲ್ಯಮಾಪನದಲ್ಲಿ ವಿಫಲಗೊಂಡವರ ವಿರುದ್ಧ ಆರ್ಮಿ ರೆಗ್ಯುಲೇಷನ್ ಮತ್ತು ಆರ್ಮಿ ಆಯಕ್ಟ್ ಅಡಿ ಸಂಭಾವ್ಯ ಕ್ರಮಗಳಿಗೆ ಮಾರ್ಗಸೂಚಿಗಳು ಒತ್ತು ನೀಡಿವೆ.