ತಿರುವನಂತಪುರಂ: ಸರ್ಕಾರದಿಂದ ಒಪ್ಪಂದದ ಮೊತ್ತ ಲಭಿಸದ ಹಿನ್ನೆಲೆಯಲ್ಲಿ, ಕೆಲ್ಟ್ರಾನ್ ಎಐ ಕ್ಯಾಮೆರಾಗಳಿಂದ ಪತ್ತೆಯಾದ ಉಲ್ಲಂಘನೆಗಳಿಗೆ ನೋಟಿಸ್ ಕಳುಹಿಸಲು ನಿಯೋಜಿಸಲಾದ ಗುತ್ತಿಗೆ ನೌಕರರನ್ನು ಹಿಂಪಡೆದಿದೆ. ಸರ್ಕಾರವು 11 ಕೋಟಿ ರೂ.ಕೆಲ್ಟ್ರಾನ್ ಗೆ ನೀಡಲು ಬಾಕಿಯಿದೆ.
ಈ ಕುರಿತು ಹಣಕಾಸು ಸಚಿವರೊಂದಿಗೆ ಚರ್ಚಿಸುವುದಾಗಿ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ತಿಳಿಸಿದ್ದಾರೆ.ಎಐ ಕ್ಯಾಮೆರಾಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ದಾಖಲಾಗುತ್ತಿದೆ, ಆದರೆ ಮೋಟಾರು ವಾಹನ ಇಲಾಖೆ ಅಧಿಕಾರಿಗಳು ಮಾತ್ರ ನಿಯಂತ್ರಣ ಕೊಠಡಿಯಲ್ಲಿದ್ದಾರೆ. ಗುತ್ತಿಗೆ ಸಿಬ್ಬಂದಿ ಉಲ್ಲಂಘನೆಗಳನ್ನು ಗುರುತಿಸಿ ನೋಟಿಸ್ ಕಳುಹಿಸುವ ಕಾರ್ಯವನ್ನು ನಿರ್ವಹಿಸುತ್ತಾರೆ. ಕೆಲ್ಟ್ರಾನ್‍ನಿಂದ ವಿಶೇಷ ತರಬೇತಿಯನ್ನೂ ನೀಡಲಾಗಿತ್ತು.
ಪ್ರತಿ ಜಿಲ್ಲೆಯಲ್ಲಿ ಮೂರರಿಂದ ಐದು ಮಂದಿ ನೌಕರರಿದ್ದರು. ಕೆಲ್ಟ್ರಾನ್ ಕ್ಯಾಮೆರಾಗಳನ್ನು ಅಳವಡಿಸಿದ್ದು, ನಿರ್ವಹಣೆ ಮಾಡಲು ಸರಕಾರ ಕೆಲ್ಟ್ರಾನ್ ನ್ನು ನಿಯೋಜಿಸಿತ್ತು. ಒಪ್ಪಂದದ ಮೊತ್ತ ಪಾವತಿಯಾಗಿಲ್ಲ ಎಂದು ಕೆಲ್ಟ್ರಾನ್ ಸರ್ಕಾರಕ್ಕೆ ಪತ್ರ ಕಳುಹಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.