HEALTH TIPS

ಬೂತ್ ಗೆದ್ದರೆ ರಾಜ್ಯ ಗೆದ್ದಂತೆ: ಪ್ರಧಾನಿ ಮೋದಿ ವಿಶ್ವಾಸ

             ಕೊಚ್ಚಿ: ಇದುವರೆಗೂ ಬಿಜೆಪಿ ನೆಲೆ ಕಂಡುಕೊಳ್ಳದ ಕೇರಳದಲ್ಲಿ ಮತದಾರರ ಮನ ಗೆಲ್ಲುವ ಕುರಿತು ಪ್ರಧಾನಿ ನರೇಂದ್ರ ಮೋದಿ ಬುಧವಾರ ಪಕ್ಷದ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು. ಬೂತ್ ಮಟ್ಟದ ಸುಮಾರು 6,000 ಉಸ್ತುವಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಬಿಜೆಪಿ ಕಾರ್ಯಕರ್ತರು ತಮ್ಮ ಬೂತ್​ಗಳಲ್ಲಿ ಗೆಲುವು ಸಾಧಿಸಬೇಕು.

              ನಮ್ಮ ಬೂತ್​ಗಳನ್ನು ನಾವು ಗೆದ್ದರೆ, ಕೇರಳವನ್ನು ಗೆಲ್ಲುತ್ತೇವೆ. ಅದಕ್ಕಾಗಿ ನೀವು (ಪಕ್ಷದ ಕಾರ್ಯಕರ್ತರು) ಪ್ರತಿ ಬೂತ್ ಮಟ್ಟದಲ್ಲಿ ಮತದಾರರ ಮೇಲೆ ಗಮನ ಕೇಂದ್ರೀಕರಿಸಿ, ಶ್ರಮಿಸಬೇಕು ಎಂದರು.

             ಪ್ರತಿ ಬೂತ್​ನಲ್ಲಿ ಪ್ರತಿಯೊಬ್ಬ ಫಲಾನುಭವಿಯ ಪಟ್ಟಿಯನ್ನು ಹೊಂದಿರಬೇಕು. ಅವರ ಕುಟುಂಬಗಳನ್ನು ಭೇಟಿ ಮಾಡಿ, ಸರ್ಕಾರದ ಸಾಧನೆ ತಿಳಿಸಬೇಕು. ಕೇರಳದಲ್ಲಿ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ಸರ್ಕಾರದ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನೂ ಸೇರಿಸಿಕೊಳ್ಳಿ. 'ಮೋದಿ ಕಿ ಗ್ಯಾರಂಟಿ' ವಾಹನ ಬಳಿ ಜನರನ್ನು ಕರೆತರಬೇಕು. ಮೋದಿ ಕಿ ಗ್ಯಾರಂಟಿ ಎಂದರೆ ಭರವಸೆಗಳನ್ನು ಈಡೇರಿಸುವ ಬದ್ಧತೆ. ಈ ಸಂದೇಶವನ್ನು ಜನರಿಗೆ ತಲುಪಿಸಬೇಕು. ತ್ವರಿತ ಅಭಿವೃದ್ಧಿ ಮತ್ತು ಭವಿಷ್ಯದ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿರುವ ಭಾರತದ ಏಕೈಕ ಪಕ್ಷ ಬಿಜೆಪಿ.

                    4,000 ಕೋಟಿ ರೂಪಾಯಿ ಯೋಜನೆಗೆ ಚಾಲನೆ: ಕೊಚ್ಚಿನ್ ಶಿಪ್​ಯಾರ್ಡ್​ನ ಪ್ರಮುಖ ಕಾರ್ಯತಂತ್ರದ ಉಪಕ್ರಮಗಳು ಸೇರಿ 4,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದೇಶಕ್ಕೆ ಸಮರ್ಪಿಸಿದರು. ಇದು ದಕ್ಷಿಣ ಪ್ರದೇಶದ ಅಭಿವೃದ್ಧಿಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಗುರುವಾಯೂರು ದೇಗುಲಕ್ಕೆ ಭೇಟಿ: ಪ್ರಧಾನಿ ಮೋದಿ ಬುಧವಾರ ಕೇರಳದ ಗುರುವಾಯೂರಿನಲ್ಲಿರುವ ಪ್ರಸಿದ್ಧ ಶ್ರೀಕೃಷ್ಣ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಟ-ರಾಜಕಾರಣಿ ಸುರೇಶ್ ಗೋಪಿ ಅವರ ಕುಟುಂಬ ವಿವಾಹದಲ್ಲಿ ಪಾಲ್ಗೊಂಡರು. ಮಲಯಾಳಂ ಚಿತ್ರರಂಗದ ಪ್ರಮುಖ ನಟರನ್ನೂ ಈ ವೇಳೆ ಅವರು ಭೇಟಿ ಮಾಡಿದರು. ಪ್ರಧಾನಿ ಸಾಂಪ್ರದಾಯಿಕ ಉಡುಗೆ ಮತ್ತು ಬಿಳಿ ಶಾಲನ್ನು ಧರಿಸಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ದೇವಾಲಯದ ದೈವಿಕ ಶಕ್ತಿ ಅಪಾರವಾಗಿದೆ. ಪ್ರತಿಯೊಬ್ಬ ಭಾರತೀಯ ಸಂತೋಷ ಮತ್ತು ಸಮೃದ್ಧರಾಗಿರಲು ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಕೇರಳದ ತ್ರಿಪ್ರಯಾರ್ ರಾಮಸ್ವಾಮಿ ದೇವಸ್ಥಾನಕ್ಕೂ ಅವರು ಭೇಟಿ ನೀಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries