ತಿರುವನಂತಪುರ: ಮಳೆ ಕೈಕೊಟ್ಟಿದ್ದರಿಂದ ರಾಜ್ಯದಲ್ಲಿ ಹಗಲಿರುಳು ಬಿಸಿಲಿನ ತಾಪಮಾನ ತೀವ್ರ ಏರಿಕೆಯಾಗುತ್ತಿದೆ. ಭಾನುವಾರ ಹಲವೆಡೆ ಹಗಲಿನ ತಾಪಮಾನ 36 ಡಿಗ್ರಿ ಸೆಲ್ಸಿಯಸ್‍ನಷ್ಟಿತ್ತು.
ಸೋಮವಾರ ದಕ್ಷಿಣ ಭಾರತದಲ್ಲಿ ತುಲಾವರ್ಷ ಸಂಪೂರ್ಣ ಹಿಂದೆ ಸರಿಯಲಿದೆ ಎಂದು ಕೇಂದ್ರ ಹವಾಮಾನ ಕೇಂದ್ರ ಪ್ರಕಟಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಇನ್ನೆರಡು ವಾರ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ.
ಕಣ್ಣೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 36.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕೊಟ್ಟಾಯಂ ಮತ್ತು ಆಲಪ್ಪುಳದಲ್ಲಿ ಕಳೆದ 24 ಗಂಟೆಗಳಲ್ಲಿ 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕಾಸರಗೋಡು, ಕೊಚ್ಚಿ ಮತ್ತು ಕೋಯಿಕ್ಕೋಡ್ ನಲ್ಲಿ 34 ಡಿಗ್ರಿ ಸೆಲ್ಸಿಯಸ್ ಉμÁ್ಣಂಶ ದಾಖಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ 30 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಏತನ್ಮಧ್ಯೆ, ರಾತ್ರಿಯ ಉಷ್ಣತೆಯು 21 ಡಿಗ್ರಿಗಳಿಂದ 24 ಡಿಗ್ರಿ ಸೆಲ್ಸಿಯಸ್ ವರೆಗೆ ಕಂಡುಬಂದಿದೆ.
ಡಿಸೆಂಬರ್ ಮೊದಲ ವಾರದಿಂದ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇಂದಿನಿಂದ ತುಲಾವರ್ಷ ಸಂಪೂರ್ಣ ಹಿಂದೆ ಸರಿಯುವುದರಿಂದ ತೆಲಂಗಾಣದಿಂದ ಲಕ್ಷದ್ವೀಪದವರೆಗೆ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಕೇಂದ್ರವೂ ತಿಳಿಸಿದೆ.