ಕುಂಬಳೆ: ಆರಿಕ್ಕಾಡಿ ಶ್ರೀ ಮಲ್ಲಿಕಾರ್ಜುನ ಕುಟುಂಬ, ಶ್ರೀ ನಾಗ ದೇವರ ಪ್ರತಿಷ್ಠಾ ಬ್ರಹ್ಮಕಲಾಶೋತ್ಸವದ ಅಂಗವಾಗಿ ವೈದಿಕ, ಸಾಂಸ್ಕøತಿಕ ಹಾಗೂ ಸಭಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಕುಂಬಳೆ ಆರಿಕ್ಕಾಡಿ ಮಲ್ಲಿಕಾರ್ಜುನ ಕೋಟೆ ವೀರಆಂಜನೇಯ ಕ್ಷೇತ್ರ ಸಮುಚ್ಚಯದ ಪ್ರದಾನ ಅರ್ಚಕ ಶ್ರೀನಾಥ್ ಪುರೋಹಿತರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ನಾಗ ಪ್ರತಿಷ್ಠಾ ಬ್ರಹ್ಮ ಕಳಶಶೋತ್ಸವ ಸಮಿತಿ ಅಧ್ಯಕ್ಷರಾದ ಉಮೇಶ್ ರಾವ್ ಕುಂಬ್ಳೆ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿ ಅಧ್ಯಕ್ಷ ವಾಮನ್ ರಾವ್ ಬೇಕಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾಸಂಘ ಜಿಲ್ಲಾ ಮಹಿಳಾ ಸಂಘ ಗೌರವ ಅಧ್ಯಕ್ಷೆ ಆಶಾರಾಧಾಕೃಷ್ಣ ಅಣಂಗೂರ್, ಬಾಲಕೃಷ್ಣ ಕುಂಬ್ಳೆ, ವಿಶ್ವ ರಾಮಕ್ಷತ್ರಿಯ ಮಹಾಸಂಘ, ಸಂಘಟನಾ ಕಾರ್ಯದರ್ಶಿ ಸಂದ್ಯಾ ರಾಣಿ ಟೀಚರ್ ಕಾಸರಗೋಡು, ದಾಮೋದರ್ ಮುಂಬೈ, ಲೀಲಾವತಿ ಮುಂಬೈ ಮೊದಲಾದದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ, ಮಲ್ಲಿಕಾರ್ಜುನ ಕುಟುಂಬ ಭಜನಾ ಸಂಘ, ರಾಮಕ್ಷತ್ರಿಯ ಭಜನಾ ಸಂಘ ಕುಂಬ್ಳೆ, ಶ್ರೀ ಶಂಕರ ಚಿನ್ಮಯ ಭಜನಾ ಸಂಘ ವಿದ್ಯಾನಗರ, ಹನುಮ ಭಕ್ತ ವಿರಿಂದ ಆರಿಕ್ಕಾಡಿ, ಇವರಿಂದ ಭಜನೆ ಸಂಕೀರ್ತನೆ ನಡೆಯಿತು.