ಕಾಸರಗೋಡು: ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ಅಧೀನದಲ್ಲಿ ವೆಲ್ಲಾಚ್ಚಲ್‍ನಲ್ಲಿ ಬಾಲಕರ ಎಂಆರ್‍ಎ¸ ಗೆ ಕೌನ್ಸೆಲಿಂಗ್‍ನಲ್ಲಿ ಕೆಲಸ ಮಾಡಿದ ಅನುಭವವಿರುವ ಸೈಕಾಲಜಿ ಯಾ ಸೋಶಿಯಲ್ ವರ್ಕ್ ಅಥವಾ ಸೋಶಿಯಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಾಸಿಕ 20,000 ವೇತನ ಲಭಿಸಲಿದ್ದು, ಮಾರ್ಚ್ 2024 ರವರೆಗೆ ನೇಮಕ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳು ಜನವರಿ 20 ರಂದು ಬೆಳಿಗ್ಗೆ 10.30 ಕ್ಕೆ ಮೂಲ ಪ್ರಮಾಣ ಪತ್ರದೊಂದಿಗೆ ಕಾಸರಗೋಡು ಸಿವಿಲ್ ಸ್ಟೇಷನ್‍ನಲ್ಲಿ ಕಾರ್ಯಚರಿಸುವ ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಛೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಯ ದೂರವಾಣಿ ಸಂಖ್ಯೆ (04994 256162)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.