ಇಂದೋರ್: ವಾಟ್ಸ್‌ಆಯಪ್ ಮೂಲಕ ಪತ್ನಿಗೆ ಧ್ವನಿ ಸಂದೇಶ ಕಳುಹಿಸಿ ತ್ರಿವಳಿ ತಲಾಕ್ ನೀಡಿದ 27 ವರ್ಷದ ವ್ಯಕ್ತಿ ವಿರುದ್ಧ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಂದೋರ್: ವಾಟ್ಸ್‌ಆಯಪ್ ಮೂಲಕ ಪತ್ನಿಗೆ ಧ್ವನಿ ಸಂದೇಶ ಕಳುಹಿಸಿ ತ್ರಿವಳಿ ತಲಾಕ್ ನೀಡಿದ 27 ವರ್ಷದ ವ್ಯಕ್ತಿ ವಿರುದ್ಧ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
23 ವರ್ಷದ ಮಹಿಳೆ ನೀಡಿದ ದೂರಿನ ಅನ್ವಯ ರಾವ್‌ಜಿ ಬಜಾರ್ ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಮಹಿಳೆಯರ ವಿವಾಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಬ್ ಇನ್‌ಸ್ಪೆಕ್ಟರ್ ರಾಮ್ ಕುಮಾರ್ ರಘುವಂಶಿ ತಿಳಿಸಿದ್ದಾರೆ.
ಈ ದಂಪತಿ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಮಗಳು ಇದ್ದಾಳೆ. ವಿವಾಹವಾದ ಮೂರು ತಿಂಗಳ ನಂತರ ಪತಿ ಹಿಂಸೆ ನೀಡಲು ಆರಂಭಿಸಿದರು. ಗರ್ಭಿಣಿಯಾದ ನಂತರ ಶೀಲವನ್ನು ಶಂಕಿಸಿ ಹಲ್ಲೆ ನಡೆಸುತ್ತಿದ್ದರು. ಡಿ. 18ರಂದು ವಾಟ್ಸ್‌ಆಯಪ್ ಮೂಲಕ ತಲಾಕ್ ಕಳುಹಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈವರೆಗೂ ಆರೋಪಿಯ ಬಂಧನವಾಗಿಲ್ಲ ಎಂದೂ ಪೊಲೀಸರು ಹೇಳಿದ್ದಾರೆ.