ಉಪ್ಪಳ: ಶಂಪಾ ಪ್ರತಿಷ್ಠಾನ ಬೆಂಗಳೂರು ವತಿಯಿಂದ ವಿಶ್ರಾಂತ ಪ್ರಾಂಶುಪಾಲ ಪ್ರೊ. ಪಿ.ಎನ್ ಮೂಡಿತ್ತಾಯ ಅವರ ಕುರಿತಾಗಿ ಡಾ. ಪ್ರಮಿಳಾ ಮಾಧವ್ ರಚಿಸಿದ 'ಸದ್ದಿಲ್ಲದ ಸಾಧಕ'ಕೃತಿ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭ ಪೈವಳಿಕೆ ಸನಿಹದ ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾಮಂದಿರದಲ್ಲಿ ಜರುಗಿತು.
ವಿಶ್ರಾಂತ ಪ್ರಾಧ್ಯಾಪಕ, ಸಂಶೋಧಕ ಡಾ. ಪಿ.ಶ್ರೀಕೃಷ್ಣ ಭಟ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ತಮ್ಮ ಕರ್ತವ್ಯಪರತೆ ಹಾಗೂ ಸಾಧನೆ ಮೂಲಕ ಪ್ರೊ. ಪಿ.ಎನ್ ಮೂಡಿತ್ತಾಯ ಅವರು ಅಜಾತಶತ್ರುವಾಗಿ ಬೆಳೆದುನಿಂತಿದ್ದಾರೆ. ಎಲ್ಲರೊಂದಿಗೂ ಬೆರೆತು ಎಳೆಯ ಪ್ರತಿಭಾನ್ವಿತರನ್ನು ಬೆಳೆಸಿಕೊಂಡು ಬರುವ ಮೂಲಕ ಪ್ರೊ. ಮೂಡಿತ್ತಾಯ ಅವರು ಶ್ರೇಷ್ಟತೆ ಕಾಯ್ದುಕೊಂಡು ಬಂದಿರುವುದಾಗಿ ತಿಳಿಸಿದರು.
.ಡಾ. ಪ್ರಮೀಳಾ ಮಾಧವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕ.ಸಾ.ಪ ಕೇರಳ ಗಡಿನಾಡ ಘಟಕ ಅದ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಟಿ.ಎ.ಎನ್ ಖಂಡಿಗೆ ಕೃತಿ ಲೋಕಾರ್ಪಣೆಗೈದು ಕೃತಿಯ ಬಗ್ಗೆ ಮಾತನಾಡಿದರು. ನಿವೃತ್ತ ಶಿಕ್ಷಕ, ಶಿಕ್ಷಣ ತಜ್ಞ ವಿ.ಬಿ ಕುಳಮರ್ವ, ಕಾಸರಗೊಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಕಾಸರಗೋಡು ನುಳ್ಳಿಪ್ಪಾಡಿ ಸೀತಮ್ಮಪುರುಷನಾಯಕ ಕನ್ನಡ ಭವನ ಸಂಸ್ಥಾಪಕ ವಾಮನರಾವ್ ಬೇಕಲ್ ಉಪಸ್ಥಿತರಿದ್ದರು. ಈ ಸಂದರ್ಭ ಪ್ರೊ. ಪಿ.ಎನ್ ಮೂಡಿತ್ತಾಯ ಅವರನ್ನು ವಿವಿಧ ಸಂಘಟನೆಗಳ ಪರವಾಗಿ ಅಬಿನಂದಿಸಲಾಯಿತು. ಡಾ. ರಾಧಾಕೃಷ್ಣ ಬೆಳ್ಳೂರು ಕಾರ್ಯಕ್ರಮ ನಿರೂಪಿಸಿದರು. ಡಾ. ಎಸ್.ಎಲ್ ಮಂಜುನಾಥ್ ಸ್ವಾಗತಿಸಿ ವಂದಿಸಿದರು.
ಈ ಸಂದರ್ಭ ಪ್ರೊ. ಪಿ.ಎನ್ ಮೂಡಿತ್ತಾಯ ಅವರ ಕೃತಿಗಳ ಬಗ್ಗೆ ವಿಚಾರಮಂಡನೆ, ಸಾಂಸ್ಕøತಿಕ ವ್ಯವಿಧ್ಯ, ಅಭಿನಂದಿತರೊಂದಿಗೆ ಸಂವಾದ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.