ಕಾಸರಗೋಡು: ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿಯು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಅವಕಾಶಗಳ ಕುರಿತು ಚರ್ಚಿಸಲು ಸಾಮಾಜಿಕ ಮಾಧ್ಯಮ ಪ್ರಭಾವಿಗಳ ಸಭೆಯನ್ನು ಆಯೋಜಿಸಿದೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರೇರಣೆ ನೀಡುವ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದೆ. ಪ್ರಭಾವಿಗಳು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಡಿಟಿಪಿಸಿ ಕಾರ್ಯದರ್ಶಿ ಲಿಜೋ ಜೋಸೆಫ್ ಮಾತನಾಡಿ, ಕಾಸರಗೋಡು ಜಿಲ್ಲೆಯಲ್ಲಿ ಇದುವರೆಗೂ ಹೊರಜಗತ್ತಿಗೆ ತಿಳಿಯದ ಹಲವು ಮನರಂಜನಾ ಕೇಂದ್ರಗಳಿದ್ದು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಿಲ್ಲೆಗೆ ಹೆಚ್ಚಿನ ಸಾಮಥ್ರ್ಯವಿದೆ. ಜಿಲ್ಲೆಯ ಪ್ರಮುಖ ಹಾಗೂ ಪತ್ತೆಯಾಗದ ಪ್ರವಾಸಿ ತಾಣಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಇದು ತುಂಬಾ ಉಪಯುಕ್ತವಾಗಲಿದೆ ಎಂದು ಲಿಜೋ ಜೋಸೆಫ್ ತಿಳಿಸಿದರು.
ಸಾಮಾಜಿಕ ಮಾಧ್ಯಮದ ಪ್ರಭಾವಿಗಳಾದ ಎನ್.ದೀಕ್ಷಿತಾ, ಬಿನ್ನು ಕಾಸ್ರೋಡ್, ಅಬ್ದುಲ್ ವಾಹಿದ್, ಮೊಹಮ್ಮದ್ ಜಮ್ಷಿದ್, ಮಾಳವಿಕಾ ಮೆನನ್, ಟಿ.ವಿ.ಸೌಜಿತ್, ಆರ್.ಎನ್.ಅಭಿಷೇಕ್, ನ್ಯಾಯವಾದಿ. ನಿಜಾಮ್ ಫಲಾಹ್, ಪ್ರಜ್ವಲ್, ಚಿನ್ನು ಪಪ್ಪು, ಖಾದರ್ ಕರಿಪೊಡಿ, ಮುನೀರ್ ಫ್ಲಾಶ್, ಶಹಸ್ಮಾನ್ ತೋಟತ್, ಖಾಲಿದ್ ಶಾನ್, ನಸೀಬಾ, ಆಯೇಷಾ ರಫಿಯಾ, ಅರ್ಶನಾ ಅದಬಿಯೆ ಭಾಗವಹಿಸಿದ್ದರು.
ವಿಶ್ವ ಪ್ರವಾಸೋದ್ಯಮ ದಿನದಂದು ಆಯೋಜಿಸಲಾದ ರೀಲ್ಸ್ ಸ್ಪರ್ಧೆಯ ಕೊನೆಯ ದಿನಾಂಕವನ್ನು ಫೆಬ್ರವರಿ 28 ಕ್ಕೆ ಬದಲಾಯಿಸಲಾಗಿದೆ.