ಕಣ್ಣೂರು: ಕಣ್ಣೂರು ರೈಲು ನಿಲ್ದಾಣದ ಬಳಿ ರೈಲು ಹಳಿ ತಪ್ಪಿದ ಘಟನೆ ನಡೆದಿದೆ. ಕಣ್ಣೂರು-ಆಲಪ್ಪುಳ ಎಕ್ಸಿಕ್ಯೂಟಿವ್ ಎಕ್ಸ್‍ಪ್ರೆಸ್ ಹಳಿತಪ್ಪಿದೆ.
ಶನಿವಾರ ಮುಂಜಾನೆ 4.40ಕ್ಕೆ ಈ ಘಟನೆ ನಡೆದಿದೆ. ರೈಲನ್ನು ಅಲಪ್ಪುಳಕ್ಕೆ ಹೊರಡಲು ಪ್ಲಾಟ್‍ಫಾರ್ಮ್‍ಗೆ ತೆಗೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯ ಎರಡು ಬೋಗಿಗಳು ಹಳಿತಪ್ಪಿವೆ.
ಪ್ರಯಾಣ ಆರಂಭವಾಗುವ ಮುನ್ನವೇ ಭಾರೀ ಅನಾಹುತ ತಪ್ಪಿದೆ. ಘಟನೆಯ ಬಳಿಕ ಅಪಘಾತಕ್ಕೀಡಾದ ಬೋಗಿಗಳನ್ನು ಬೇರ್ಪಡಿಸಲಾಗಿದೆ. ಬೆಳಗ್ಗೆ 5.10ಕ್ಕೆ ಹೊರಡಬೇಕಿದ್ದ ರೈಲು ಒಂದು ಗಂಟೆ ತಡವಾಗಿ 6.43ಕ್ಕೆ ಕಣ್ಣೂರಿನಿಂದ ಹೊರಟಿತು.
ಮುಖ್ಯರಸ್ತೆಗೆ ಸಮಾನಾಂತರವಾದ ಟ್ರ್ಯಾಕ್‍ನಲ್ಲಿ ಅಪಘಾತ ಸಂಭವಿಸಿದೆ. ಸಿಗ್ನಲ್ ಬಾಕ್ಸ್ ಗೆ ಹಾನಿಯಾಗಿದ್ದರೂ ಸೇವೆಗಳಿಗೆ ಹೆಚ್ಚಿನ ತೊಂದರೆಯಾಗಿಲ್ಲ. ರೈಲು ಹಳಿ ತಪ್ಪಲು ಕಾರಣವೇನು ಎಂದು ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.