ಕಾಸರಗೋಡು: ಜಿಲ್ಲೆಯ ಎಸ್.ಎಸ್.ಎಲ್.ಸಿ. ಮತ್ತು ಪ್ಲಸ್ ಟು ವಿದ್ಯಾರ್ಥಿಗಳ ಅಧ್ಯಯನ ಹೊರೆ ಕಡಿಮೆ ಮಾಡಲು ಹಾಗೂ ಅಂತಿಮ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಸಜ್ಜು (ಶಿಕ್ಷಣ ಗುಣಮಟ್ಟ ಸುಧಾರಣೆ ಕಾರ್ಯಕ್ರಮ) ಹೆಸರಿನಲ್ಲಿ ಅಧ್ಯಯನ ಸಾಮಗ್ರಿ ಸಿದ್ಧಪಡಿಸಲಾಗಿದೆ.
ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರ್ ಅವರು ಅಧ್ಯಯನ ಪರಿಕರಗಳನ್ನು ಹಸ್ತಾಂತರಿಸಿದರು. ನಾರಾಯಣನ್, ಅಜಯಕುಮಾರ್ ಮತ್ತು ಶಿಕ್ಷಕಿ ಜ್ಯೋತಿ ಕಾಸರಗೋಡು ಮತ್ತು ಕಾಞಂಗಾಡು ಶಿಕ್ಷಣ ಜಿಲ್ಲೆಯ ಎಚ್‍ಎಂ ಪೋರಂ ಸಂಚಾಲಕರನ್ನು ಅಭಿನಂದಿಸಿದರು. ಪ್ಲಸ್ ಟುನಲ್ಲಿ ಆರು ವಿಷಯಗಳಿಗೆ ಮತ್ತು ಎಸ್‍ಎಸ್‍ಎಲ್‍ಸಿಗೆ ಎಲ್ಲಾ ವಿಷಯಗಳಿಗೆ ಮಲಯಾಳಂ, ಇಂಗ್ಲಿμï ಮತ್ತು ಕನ್ನಡ ಭಾಷೆಗಳಲ್ಲಿ ಅಧ್ಯಯನ ಮಾರ್ಗದರ್ಶಿ ಸಿದ್ಧಪಡಿಸಲಾಗಿದೆ. ಅರೇಬಿಕ್, ಉರ್ದು ಮತ್ತು ಸಂಸ್ಕøತ ಭಾಷಾ ವಿಷಯಗಳ ಪುಸ್ತಕಗಳೂ ಇವೆ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ನಂದಿಕೇಶನ್ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಯಟ್ ನೆರವಿನೊಂದಿಗೆ ತಜ್ಞರ ಮೇಲ್ವಿಚಾರಣೆಯಲ್ಲಿ ಸಜ್ಜುಗೊಳಿಸಲಾಗಿದೆ. ಯೋಜನೆಗೆ ಜಿಲ್ಲಾ ಪಂಚಾಯಿತಿ 6.5 ಲಕ್ಷ ರೂ.ವೆಚ್ಚ ಭರಿಸಿದೆ.
ಜಿಲ್ಲಾ ಪಂಚಾಯತ್ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ಎನ್.ಸರಿತಾ, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಳಾ, ಜಿಲ್ಲಾ ಪಂಚಾಯತಿ ಸದಸ್ಯರಾದ ಸಿ.ಜೆ.ಸಜಿತ್, ಜಾಸ್ಮಿನ್ ಕಬೀರ್, ನಜ್ಮಾ ರಫಿ, ಜಿಲ್ಲಾ ಯೋಜನಾಧಿಕಾರಿ ಟಿ.ರಾಜೇಶ್, ಯೋಜನಾ ಸಮಿತಿ ಸರ್ಕಾರಿ ನಾಮನಿರ್ದೇಶಿತ ನ್ಯಾಯವಾದಿ.ಸಿ.ರಾಮಚಂದ್ರನ್, ಉಪ. ಶಿಕ್ಷಣ ನಿರ್ದೇಶಕ ಎನ್.ನಂದಿಕೇಶನ್, ಡಯಟ್ ಪ್ರಾಂಶುಪಾಲ ರಘುರಾಮ್ ಭಟ್, ಅಧ್ಯಾಪಕ ಮಧುಸೂಧನ್ ಉಪಸ್ಥಿತರಿದ್ದರು.