ಕಾಸರಗೋಡು: ಕೊಲ್ಲಂನಲ್ಲಿ ನಡೆಯುತ್ತಿರುವ ಕೇರಳ ರಾಜ್ಯ ಶಾಲಾ ಕಲೋತ್ಸವದ ಕನ್ನಡ ಭಾಷಣದಲ್ಲಿ ವೈಷ್ಣವಿ ಬಿ.ಎಸ್ 'ಎ'ಗ್ರೇಡ್ ಪಡೆದುಕೊಂಡಿದ್ದಾರೆ. ಜಿಲ್ಲೆಯ ಮಧೂರು ಸನಿಹದ ಪಟ್ಲ ಬದಿಮನೆ ನಿವಾಸಿ, ಕೃಷಿಕ ಸಂತೋಷ್ ಕುಮಾರ್-ಮಾಲತಿ ದಂಪತಿ ಪುತ್ರಿ ಹಾಗೂ ಕಾಸರಗೋಡಿನ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ.