ಕಾಸರಗೋಡು : ಕೊಲ್ಲಂನಲ್ಲಿ ಜರಗಿದ ಕೇರಳ ರಾಜ್ಯ 62ನೇ ಶಾಲಾ ಕಲೋತ್ಸವದಲ್ಲಿ ಸಂಸ್ಕøತ ವಿಭಾಗದ ಚಂಪೂ ಪ್ರಭಾಷಣ ಸ್ಪರ್ಧೆಯಲ್ಲಿ 'ಎ'ಗ್ರೇಡ್ ಲಭಿಸಿದ ಶಿವಾನಿ ಕೂಡ್ಲು ಹಾಗೂ ಕನ್ನಡ ಭಾಷಣ ಸ್ಪರ್ಧೆಯಲ್ಲಿ 'ಎ' ಗ್ರೇಡ್ ಲಭಿಸಿದ ವೈಷ್ಣವಿ ಬಿ.ಎಸ್ ಇವರಿಗೆ ಕೂಡ್ಲು ಶ್ರೀ ಗೋಪಾಲಕೃಷ್ಣ ಹೈಯರ್‍ಸೆಕೆಂಡರಿ ಶಾಲಾ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯ ಶಿಕ್ಷಕ ಶ್ರೀಹರಿ ಅವರು ವಿಜೇತ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ, ಹಾರ ಹಾಕಿ, ಹೂಗುಚ್ಛ ನೀಡಿ ಗೌರವಿಸಿದರು. ಶಾಲಾ ಕಲೋತ್ಸವದ ಸಂಚಾಲಕ ಶ್ರೀಲತಾ, ರಾಜಶ್ರೀ, ಹರ್ಷಿತ ಹಾಗು ಸಂಸ್ಕೃತ ಕಲೋತ್ಸವದ ಸಂಚಾಲಕ ಮುರಳಿಧರ ಶರ್ಮ ಉಪಸ್ಥಿತರಿದ್ದರು. ಹಿರಿಯ ಅಧ್ಯಾಪಕ ಹರ್ಷಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.