ಕಾಸರಗೋಡು: ಸೂಕ್ಷ್ಮ ಕಲಾಕೃತಿಗಳ ರಚನೆಯ ಮೂಲಕ ಈಗಾಗಲೇ ಗುರುತಿಸಿಕೊಂಡಿರುವ ಗಡಿನಾಡು ಕಾಸರಗೋಡಿನ ವೆಂಕಟೇಶ್ ಆಚಾರ್ಯ ಅಥವಾ ಪುಟ್ಟ. ತಲೆಬೈಲು ಅವರು. ವರ್ತಮಾನದ ವಿಷಯಗಳನ್ನು ವಸ್ತುವಾಗಿಸಿ ತಮ್ಮ ಕಲಾ ಶ್ರೀಮಂತಿಕೆಯನ್ನು ಪ್ರಸ್ತುಪಡಿಸುವ ಇವರ ಅಭಿವ್ಯಕ್ತಿ ಕಳೆದ ಕೆಲವು ವರ್ಷಗಳಿಂದ ಆಸಕ್ತರನ್ನು ಹೆಚ್ಚು ಆಕರ್ಷಿಸಿದೆ. ಇದೀಗ ಅಯೋಧ್ಯೆಯ ಶ್ರೀರಾಮ ಮಂದಿರ ಪ್ರತಿಷ್ಠಾ ಹಿನ್ನೆಲೆಯ ಸೂಕ್ಷ್ಮಚಿತ್ರ ಮತ್ತೆ ಗಮನ ಸೆಳೆದಿದೆ.
ಮುಳ್ಳೇರಿಯಾ ಸಮೀಪದ ತಲೆಬೈಲು ನಿವಾಸಿಯಾಗಿರುವ ಇವರು ಅತ್ಯಂತ ಸೂಕ್ಷ್ಮವಸ್ತುಗಳಲ್ಲಿ ಮೈಕ್ರೋ ಆರ್ಟನ್ನು ಸೃಷ್ಟಿಸಬಲ್ಲ ಸೃಜನಶೀಲ ಕಲಾವಿದ. ಸುಬ್ರಾಯ ಆಚಾರ್ಯ-ಶಾರದಾ ದಂಪತಿ ಗಳ ಪುತ್ರರಾಗಿರುವ ವೆಂಕಟೇಶ್ ವೃತ್ತಿ ಜತೆಗೆ ಪೃವೃತ್ತಿಪರವಾಗಿ ಸೂಕ್ಷ್ಮಕಲಾ ಸೃಷ್ಠಿಯಲ್ಲಿ ತೊಡಗಿಸಿಕೊಂಡವರು.
ಪ್ರಥಮ ನೋಟಕ್ಕೆ ವೀಕ್ಷಕರ ಚಿತ್ತಾಕರ್ಷಕವನ್ನು ಸೆಳೆಯ ಬಲ್ಲಂತಹ ಇವರ ಕಲೆಯನ್ನು ತಮ್ಮ ಒಡನಾಡಿಗಳು ಪೆÇ್ರೀತ್ಸಾಹಿಸಿ ಪತ್ರಿಕಾ ಮಾಧ್ಯಮಗಳಿಗೊಪ್ಪಿಸಿದಾಗ ದೊರೆತ ಸ್ಪೂರ್ತಿ ಇನ್ನಷ್ಟು ಕಲೆಗಳನ್ನು ಸೃಷ್ಠಿಸುವಂತಾಗಿಸಿತ್ತು. ಪುಟ್ಟ ಇಚ್ಚಂಗೋಡು ಎಂಬ ಕಾವ್ಯ ನಾಮದಿಂದ ಸೂಕ್ಷ್ಮಕಲಾವಿದನಾಗಿ ಪ್ರಸಿದ್ಧಿ ಗಳಿಸಿಕೊಂಡ ವೆಂಕಟೇಶ್ ಬಳಿಕ ಸಕಾಲಿಕ ವಿಷಯಗಳನ್ನಾಧರಿಸಿ ನಿರ್ಮಿಸುವ ಮೈಕ್ರೋ ಆರ್ಟ್ (ಸೂಕ್ಷ್ಮ ಸೃಷ್ಠಿ) ಗಳು ಇವರ ಸಾಧನೆಯನ್ನು ದೇಶ ಭಾಷೆ ಮೀರಿ ಲ್ಲೆಡೆಯು ಪರಿಚಯಿಸುವಂತಾಗಿಸಿತು.
ಹೀಗೆ ರಚಿತವಾದ ಒಂದೊಂದು ಮೈಕ್ರೋ ಆರ್ಟ್ ಗಳು ಕೂಡಾ ಅತ್ಯಂತ ಮೌಲ್ಯಯುತದ್ದಾಗಿದ್ದರೂ ತಾನಾಗಿಯೇ ಸಂಗ್ರಹಿಸಿಡುವ ಇವರ ವಿಶೇಷ ಆಸಕ್ತಿ ಅತ್ಯಂತ ಸ್ತುತ್ಯಾರ್ಹವಾದುದಾಗಿದೆ. ಪ್ರಸ್ತುತ ಸೂಕ್ಷ್ಮಕಲಾವಿದರ ಸ್ಥಾನದಲ್ಲಿ ಅತ್ಯಂತ ಅಗ್ರಪಂಕ್ತಿಯಲ್ಲಿರುವ ಇವರು ಸಾಸಿವೆಕ್ಕಿಂತ ಸಣ್ಣ ತ್ರಿವರ್ಣ ಧ್ವಜ
ಸಾಸಿವೆ ಗಿಂತ ಚಿಕ್ಕ ಶಿವಲಿಂಗ
ಒಂದು ಅಕ್ಕಿ ಕಾಳಿನಲ್ಲಿ 36 ಇಂಗ್ಲಿμï ಅಕ್ಷರ 90.ಮಿ.ಗ್ರಾಂ ಚಿನ್ನದಲ್ಲಿ ಕ್ರಿಕೆಟ್ ವಿಶ್ವಕಪ್
60. ಮೀ ಗ್ರಾಂ ಪಿಪಾ ವಿಶ್ವ ಕಪ್ ಪ್ರತಿಕೃತಿಯನ್ನು ಸೃಷ್ಟಿಸಿರುವುದು ಮಾತ್ರವಲ್ಲದೆ
ರಾಷ್ಟ್ರಪಿತ ಮಹಾತ್ಮಾಗಾಂಧೀ ಅವರ ಕನಸಿನ ಸ್ವಚ್ಛ ಭಾರತದ ಕಲ್ಪನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಕ್ಷಾತ್ಕಾರಗೊಳಿಸಲು ದೇಶವಾಸಿಗಳಿಗೆ ಕರೆ ನೀಡಿದ ಸಚ್ಛಭಾರತ್ ಅಭಿಯಾನ ಯಶಸ್ಸಿನ ಪ್ರೇರಣೆ ಯಿಂದ ವೆಂಕಟೇಶ್ ಅವರು ಒಂದು ಅಕ್ಕಿಕಾಳಿನ ಗಾತ್ರದಲ್ಲಿ ಕೇವಲ.10 ಮಿಲ್ಲಿ ಗ್ರಾಂ ತೂಕದ ಚಿನ್ನದಲ್ಲಿ ಸ್ವಚ್ಛಭಾರತ್ ಲಾಂಛನವನ್ನು ರಚಿಸಿದ್ದಾರೆ.
ಈಗಾಗಲೇ ಪೆನ್ಸಿಲ್ ಲೆಡ್ ನಿಂದ ವಿಶ್ವಕಪ್, ಯೋಗಾಸನದ ಭಂಗಿ, ಲೆಡ್‍ನಲ್ಲಿ ದೀಪಾವಳಿಗೆ ಉರಿಸುವ ಹಣತೆ , ಭಾರತದ ಭೂಪಟ ಮಾತ್ರವಲ್ಲದೆ
ಒಂದು ಅಂಚೆ ಕಾರ್ಡ್‍ನಲ್ಲಿ ಓ0 ನಮಃ ಶಿವಾಯ ಎಂದು 6524 ಬಾರಿ ಶಿವ ಪಂಚಾಕ್ಷೆರಿ ಬರೆದದ್ದು,45668 ಅಕ್ಷರ
150 ಎಂದು ಬರೆದು ಸ್ವಾಮಿ ವಿವೇಕಾನಂದರ ಚಿತ್ರರಚನೆ,
ಅರ್ಧ ಇಂಚಿನ ಕಾಗದದಲ್ಲಿ 2014ರ ಕ್ಯಾಲೆಂಡರ್ ತಯಾರಿಸಿದ್ದಾರೆ,
ಓಂ ನಮಃ ಶಿವಾಯ ಎಂಬ ಅಕ್ಷರಗಳಿಂದ ಶಿವನ ಚಿತ್ರ,ನಮೋ ಮಂಜುನಾಥ ಎಂಬ ಅಕ್ಷರಗಳಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ಚಿತ್ರ,ಭಾರತದ 29 ರಾಜ್ಯ ಹೆಸರಲ್ಲಿ ನರೇಂದ್ರ ಮೋದಿಜಿ ಚಿತ್ರ
ಗುರುಭ್ಯೋ ನಮಃ ಅಕ್ಷರ ವಿಶ್ವಕರ್ಮ ಕುಲ ಗುರುಗಳ ಚಿತ್ರ
ಓಂ ಸಾಯಿ ಬಾಬಾ ಅಕ್ಷರ ಚಿತ್ರ
ನವಧಾನ್ಯಗಳಲ್ಲಿ ಆಯೋಧ್ಯೆ ನಿರ್ಮಾಣ
ಐದು ಭಕ್ತಿಗೀತೆ ಅಕ್ಷರ ಗಣಪತಿ
ಕಣಿಪುರೇಶ ಅಕ್ಷರ ಗೋಪಾಲಕೃಷ್ಣ ಚಿತ್ರ ಸಹಿತ ಅನೇಕ ವೈವಿಧ್ಯಮಯ ಚಿತ್ರಗಳಿಗೂ ರೂಪ ನೀಡಿದ್ದಾರೆ. ಕೇವಲ.10 ಮೀ ಗ್ರಾಂ ಮೇಕೆನ್ ಇಂಡಿಯ ವಾಪರೇಶನ್ ಗಂಗಾ ವಿಶ್ವ ಹಾಕಿ ಸ್ಟಿಕ್ ,100 ಮಿಲಿ ಕ್ರಿಕೆಟ್ ಪಿಚ್ ಬ್ಯಾಟ್ ಬಾಲ್ ವಿಕೆಟ್ ಅಕ್ಕಿ ಕಾಳು ಗಾತ್ರದ ತುಳುನಾಡ ಧ್ವಜ,ಕಾಂತಾರ ಸಿನಿಮಾದ ದೈವದ ಪ್ರತಿಕೃತಿ,
ಕೇವಲ.10 ಮೀ ಗ್ರಾಂ ಅಮರ್ ಜವಾನ್
ಅಗ್ನಿಫಥ್ ಸೈನಿಕ ಪ್ರತಿಕೃತಿಗಳು,
ಬೆಂಕಿ ಕಡ್ಡಿಯ ತುದಿಗಾತ್ರದ ಶಬರಿ ಮಲೆ ಸನ್ನಿಧಾನ,ಭಾರತ ಪಾರ್ಲಿಮೆಂಟ್ ,ಕ್ರಿಸ್ಮಸ್ ಗೊದುಲಿ ಮಕ್ಕಾ ಮಾಧಿನ,
ಕೇವಲ 20ಮಿಲ್ಲಿ ಚಿನ್ನದಲ್ಲಿ ಭಜನೆ ತಾಳ,ಅಕ್ಕಿ ಗಾತ್ರದ ಚಂದ್ರಯಾನ3, ಪೆಚ್ಛೆಹೆಸರು ಕಾಳು ಗಾತ್ರದ ಬೀಸುವ ಕಲ್ಲು ಅಕ್ಕಿ ಗಾತ್ರದ ಸರ್ದಾರ್ ವಲಬಾಯಿ ಪಟೇಲ್ ಪ್ರತಿಮೆ ಇವರ ಅತ್ಯಂತ ಸೂಕ್ಷ್ಮ ರಚನೆಗಳಲ್ಲಿ
ಪ್ರಸಿದ್ಧಿಯನ್ನು ಪಡೆದವುಗಳಾಗಿದೆ.
ಚಿನ್ನಾಭರಣ ನಿರ್ಮಾಣ ವೃತ್ತಿ ಜತೆಗೆ ಪ್ರವೃತ್ತಿಯಾಗಿ
ರಾಷ್ಟ್ರ ಭಕ್ತರಾಗಿರುವ ಇವರು 2015 ರಲ್ಲಿ🚩 ಹಿಂದೂಸ್ತಾನ್ ವಾಟ್ಸಾಪ್ ಗ್ರೂಪ್ ನ್ನು ಸ್ಥಾಪಿಸಿ ಅದರ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡವರು.
ತಾನು ಮಾಧ್ಯಮ ವರ್ಗದಲ್ಲಿದ್ದರು ಇನ್ನೊಬ್ಬರ ಸಹಾಯಕ್ಕೆ ಮಿಡಿಯುವ ಹೃದಯ ಇವರದ್ದು.
ಕೇವಲ ಸೂಕ್ಷ್ಮ ಚಿತ್ರ ರಚನೆಗಳಲ್ಲದೆ ಹಳೆಯ ನಾಣ್ಯಗಳ, ನೋಟುಗಳ ಸಂಗ್ರಹವೂ ಜತೆಗಿದ್ದು ಇವರ ಇನ್ನೊಂದು ಅಭಿರುಚಿಯ ಕೈಗನ್ನಡಿಯಾಗಿದೆ. ಹಲವು ಸಂಘ ಸಂಸ್ಥೆಗಳು, ಮಠ ಮಂದಿರಗಳು, ಸ್ವಾಮೀಜಿಗಳು ಇವರನ್ನು ಸನ್ಮಾನಿಸಿ ಹರಸಿದೆ.
ಇವರ ಕಲೆಯನ್ನು ಗುರುತಿಸಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಮಿತಿ ಕಾಸರಗೋಡು ಇದರ ನೇತ್ರತ್ವದಲ್ಲಿ ಮಾಜಿ ಕೇಂದ್ರ ಸಚಿವ ಢಾ:ಸುಬ್ರಮಣ್ಯನ್ ಸ್ವಾಮಿ ಇವರಿಂದ ಸನ್ಮಾನಿಸಲಾಯಿತು.
ಕೇರಳ ವಿಧಾನಸಭೆಯಲ್ಲಿ ಇವರ ಸಾಧನೆಯನು ಮಂಜೇಶ್ವರ ಶಾಸಕರು ಅನುಮೋದಿಸಿ ಅಭಿನಂಧಿಸಿದರೆ ಈಗಿನ ಆಧುನಿಕ ತಂತ್ರಜ್ಞಾನದ ಮೂಲಕ ಅಲ್ಪ ಸಾಧನೆಯನ್ನೇ ಬೆಟ್ಟದಷ್ಟು ಬಣ್ಣಿಸುವ ಪ್ರಚಾರ ಪ್ರಿಯತೆ ನಡುವೆ ತಾನು ಮಾಡಿದ ಈ ಪುಟ್ಟ ಪುಟ್ಟ ಕಲಾ ನಿರ್ಮಾಣದ ಮಹತ್ ಸಾಧನೆಯನ್ನು ಎಂದೂ ಪ್ರಚಾರತೆಗೆ ಬಳಸಿಕೊಳ್ಳದ ಇವರನ್ನು ಸ್ಬತಃ ಮಾಧ್ಯಮಗಳೇ ಗುರುತಿಸಿ ಸಾಧನೆಯನ್ನು ಗುರುತಿಸಿ ಕನ್ನಡ,ತುಳು,ಮಲೆಯಾಳ, ಇಂಗ್ಲಿμï,ಹಿಂದಿ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದ ಮೂಲಕ ಇವರ ಕಲಾ ವಿಸ್ಮಯತೆ ಬಗ್ಗೆ ವಿಶೇಷ ಸಂದರ್ಶನ ಪ್ರಸಾರಪಡಿಸಿದೆ.
ಬರಹ: ಜಯ ಮಣಿಯಂಪಾರೆ