ಕಾಸರಗೋಡು: ಮಹಿಳೆಯರಲ್ಲಿ ಸುಪ್ತವಾಗಿರುವ ಪ್ರತಿಭೆ ಬೆಳಕಿಗೆ ತರುವ ಮೂಲಕ ಸ್ತುತ್ಯರ್ಹ ಕೆಲಸ ಮಾಡುತ್ತಿರುವ ನಾರಿ ಚಿನ್ನಾರಿ ಒಳಧ್ವನಿಗೊಂದು ರಹದಾರಿ. ಮಹಿಳಾ ಪ್ರಜ್ಞೆಯ ಮೂರ್ತರೂಪ. ಗಡಿನಾಡು ಕಾಸರಗೋಡಿನ ನೆಲ ಕಾವ್ಯ ಸೃಷ್ಟಿಯಲ್ಲಿ ವಿಸ್ಮಯಗೊಳಿಸಿದ ಸಾಧಕರು ಅಷ್ಟಿಷ್ಟಲ್ಲ. ಈ ಸಾಲಿನಲ್ಲಿ ಮಹಿಳೆಯರು ಗುರುತಿಸಿಕೊಳ್ಳುತ್ತಿರುವುದು ಅಭಿನಂದನಾರ್ಹ ಎಂದು ಮಂಗಳೂರು ಆಕಾಶವಾಣಿ ನಿವೃತ್ತ ಉದ್ಘೋಷಕಿ, ಹಿರಿಯ ಸಾಹಿತಿ ಶಕುಂತಳಾ ಆರ್.ಕಿಣಿ ಹೇಳಿದರು.
ಸಾಮಾಜಿಕ-ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಅಂಗಸಂಸ್ಥೆಯಾದ ಮಹಿಳಾ ಘಟಕ ನಾರಿ ಚಿನ್ನಾರಿಯ 12 ನೇ ಸರಣಿ ಕಾರ್ಯಕ್ರಮ `ಸಾಹಿತ್ಯ ವಲ್ಲರಿ' ಕಾರ್ಯಕ್ರಮವನ್ನು ಕರಂದಕ್ಕಾಡ್‍ನ ಪದ್ಮಗಿರಿ ಕಲಾಕುಟೀರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಕಾಸರಗೋಡಿನ ಈ ಮಣ್ಣಿನಲ್ಲಿ ವಿವಿಧ ಭಾಷೆಗಳಲ್ಲಿ ಕವಿತೆಗಳ ರಚಿಸಿದ ಮಹಿಳೆಯರು ಪ್ರಪ್ರಥಮ ಬಾರಿಗೆ ಬಹುಭಾಷಾ ಕವಿಗೋಷ್ಟಿ ನಡೆಸುವ ಮೂಲಕ ಹೊಸ ಇತಿಹಾಸ ನಿರ್ಮಾಣವಾಗಿದೆ ಎಂದ ಅವರು ಮಕ್ಕಳನ್ನು ಮುದಗೊಳಿಸುವ ಅಜ್ಜಿಕತೆ ಮತ್ತು ಕಾವ್ಯ ಗಾಯನವನ್ನು ಅಳವಡಿಸಿದ್ದು ಸ್ತುತ್ಯರ್ಹ ಎಂದರು.
ಕಾರ್ಯಕ್ರಮದಲ್ಲಿ ನಾರಿ ಚಿನ್ನಾರಿ ಉಪಾಧ್ಯಕ್ಷೆ, ಸಾಹಿತಿ ಡಾ.ಯು.ಮಹೇಶ್ವರಿ ಅಧ್ಯಕ್ಷತೆ ವಹಿಸಿದರು. ಇದೇ ಸಂದರ್ಭದಲ್ಲಿ ಸಾಹಿತಿ ಪ್ರಸನ್ನಾ ವಿ.ಚೆಕ್ಕೆಮನೆ ಅವರನ್ನು ಗೌರವಿಸಲಾಯಿತು. ವಿಚಾರಸಂಕಿರಣದಲ್ಲಿ `ಯೋಗ ಮತ್ತು ನ್ಯಾಚುರೋಪತಿ' ಎಂಬ ವಿಷಯದಲ್ಲಿ ಡಾ.ಅಂಕಿತಾ ಕಿಣಿ ಸಾಕಷ್ಟು ಮಾಹಿತಿ ನೀಡಿದರು. ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಶಕುಂತಳಾ ಆರ್.ಕಿಣಿ ವಹಿಸಿದರು. ಕವಿಗೋಷ್ಠಿಯಲ್ಲಿ ಪದ್ಮಾವತಿ ಏದಾರು, ನಿರ್ಮಲಾ ಶೇಷಪ್ಪ(ತುಳು), ಸುಮಿತ್ರಾ ಎರ್ಪಕಟ್ಟೆ, ಸೌಮ್ಯಾ ಪ್ರವೀಣ್, ಕವಿತಾ ಕೂಡ್ಲು, ಜುಲೇಖಾ ಮಾಹಿನ್(ಕನ್ನಡ), ಅನ್ನಪೂರ್ಣ ಬೆಜಪ್ಪೆ, ಪ್ರಮೀಳಾ ಚುಳ್ಳಿಕ್ಕಾನ, ಧನ್ಯಶ್ರೀ ಸರಳಿ(ಹವ್ಯಕ), ಪ್ರಭಾವತಿ ಕೆದಿಲ್ಲಾಯ, ವಸಂತ ಲಕ್ಷ್ಮಿ ಪುತ್ತೂರು(ಶಿವಳ್ಳಿ ತುಳು), ಸೌಮ್ಯ ಗುರು ಕಾರ್ಲೆ, ಜ್ಯೋತ್ಸ್ನಾ ಕಡಂದೇಲು(ಕರ್ಹಾಡ), ವಿಜಯಲಕ್ಷ್ಮಿ ಶಾನು`Éೂೀಗ್(ಸ್ಥಾನಿಕ ತುಳು), ಚೇತನಾ ಕುಂಬ್ಳೆ, ಕವಿತಾ ಎಂ.ಚೆರ್ಕಳ, ಶರಣ್ಯಾ ನಾರಾಯಣನ್(ಮಲಯಾಳಂ), ಲಕ್ಷ್ಮಿ ಕೆ(ತಮಿಳು), ಶಕುಂತಳಾ ಆರ್.ಕಿಣಿ(ಕೊಂಕಣಿ), ದಿವ್ಯಾ ಗಟ್ಟಿ ಪರಕ್ಕಿಲ(ಇಂಗ್ಲೀಷ್), ಸರ್ವಮಂಗಳ ಜಯ್ ಪುಣಿಚಿತ್ತಾಯ(ಹಿಂದಿ), ಶರ್ಮಿಳಾ ಬಜಕೂಡ್ಲು(ಮರಾಠಿ), ಲಕ್ಷ್ಮಿ ಕೆ(ತೆಲುಗು) ಕವನಗಳನ್ನು ವಾಚಿಸಿದರು. ಕೊರತಿ ಪಿ.ಪಡ್ರೆ, ಶ್ರೀಲತಾ ವೈ. ಅಜ್ಜಿ ಕತೆ, ರಾಧಾ ಮುರಳೀಧರ್, ಪ್ರತಿಜ್ಞಾ ರಂಜಿತ್, ಹರಿಣಾಕ್ಷಿ ಭೋಜ ರಾವ್, ಸರಸ್ವತಿ ಮಧೂರು ಅವರಿಂದ ಕಾವ್ಯ ಗಾಯನ ನಡೆಯಿತು.
ನಾರಿ ಚಿನ್ನಾರಿ ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಲತಾ ಮೈಲಾಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದಿವ್ಯಾ ಗಟ್ಟಿ ಪರಕ್ಕಿಲ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಸರ್ವಮಂಗಳ ಜಯ್ ಪುಣಿಚಿತ್ತಾಯ ವಂದಿಸಿದರು.