ದಾವೋಸ್: 'ಭಾರತ ಎಂಬುದೇ ಅದ್ಭುತ ಯಶೋಗಾಥೆ' ಎಂದಿರುವ ಅಮೆರಿಕದ ಕಾರ್ಯದರ್ಶಿ ಆಯಂಟನಿ ಬ್ಲಿಂಕನ್, ಪ್ರಧಾನಿ ನರೇಂದ್ರ ಮೋದಿ ಅವರ ನೀತಿ ಮತ್ತು ಕಾರ್ಯಕ್ರಮಗಳು ನಾಗರಿಕರಿಗೆ ಪ್ರಯೋಜನಕಾರಿಯಾಗಿವೆ' ಎಂದು ಕೊಂಡಾಡಿದ್ದಾರೆ.
ದಾವೋಸ್: 'ಭಾರತ ಎಂಬುದೇ ಅದ್ಭುತ ಯಶೋಗಾಥೆ' ಎಂದಿರುವ ಅಮೆರಿಕದ ಕಾರ್ಯದರ್ಶಿ ಆಯಂಟನಿ ಬ್ಲಿಂಕನ್, ಪ್ರಧಾನಿ ನರೇಂದ್ರ ಮೋದಿ ಅವರ ನೀತಿ ಮತ್ತು ಕಾರ್ಯಕ್ರಮಗಳು ನಾಗರಿಕರಿಗೆ ಪ್ರಯೋಜನಕಾರಿಯಾಗಿವೆ' ಎಂದು ಕೊಂಡಾಡಿದ್ದಾರೆ.
' ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ನಡುವೆ ಉತ್ತಮ ಬಾಂಧವ್ಯವಿದೆ.
' ಎರಡೂ ದೇಶಗಳ ನಡುವೆ ನಿರಂತರ ಚರ್ಚೆಗಳು ನಡೆಯುತ್ತಿರುತ್ತವೆ. ಪ್ರಜಾಪ್ರಭುತ್ವ, ಮೂಲಭೂತ ಹಕ್ಕುಗಳೂ ಸೇರಿದಂತೆ ಎಲ್ಲ ವಿಷಯಗಳು ಭಾರತ ಮತ್ತು ಅಮೆರಿಕದ ನಡುವಿನ ಚರ್ಚೆಯ ಭಾಗವಾಗಿರುತ್ತವೆ' ಎಂದು ಅವರು ತಿಳಿಸಿದರು.
ಮೋದಿ ಆಡಳಿತದಲ್ಲಿ ಭಾರತ ಬಲಿಷ್ಠ ಆರ್ಥಿಕತೆಯಾಗಿರುವುದು ಮತ್ತು ಮೂಲಸೌಕರ್ಯ ನಿರ್ಮಾಣಗೊಂಡಿದ್ದರೂ, ಭಾರತದಲ್ಲಿ ಉದಯವಾಗಿರುವ ಹಿಂದೂ ರಾಷ್ಟ್ರೀಯತೆ ಎಂಬುದು ಆತಂಕಕ್ಕೆ ಕಾರಣವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುವ ವೇಳೆ ಬ್ಲಿಂಕನ್ ತಮ್ಮ ಅಭಿಪ್ರಾಯ ಹಂಚಿಕೊಂಡರು.