ಕೋಝಿಕ್ಕೋಡ್: ವಶಪಡಿಸಿಕೊಂಡ ಬುಲ್ಡೋಜರ್ ಯಂತ್ರವನ್ನು ಅಕ್ರಮವಾಗಿ ಕೊಂಡೊಯ್ಯಲು ಶಾಮೀಲಾಗಿದ್ದ ಪ್ರಕರಣದಲ್ಲಿ ಎಸ್‍ಐ ಓರ್ವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಎಸ್‍ಐ ನೌಶಾದ್‍ನನ್ನು ಬಂಧಿಸಲಾಗಿದೆ.
ಆರೋಪಿಗಳು ಮಣ್ಣು ತೆಗೆಯುವ ಯಂತ್ರವನ್ನು ಅಕ್ರಮವಾಗಿ ಸಾಗಿಸಲು ಸಹಾಯ ಮಾಡಿದ್ದಕ್ಕೆ ಖಚಿತವಾದ ಸಾಕ್ಷ್ಯಾಧಾರಗಳನ್ನು ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಮೊದಲ ಆರೋಪಿ ಬಶೀರ್ ನನ್ನು ಕೂಡ ಪೋಲೀಸರು ಬಂಧಿಸಿದ್ದಾರೆ.
ಘಟನೆಕಳೆದ ಸೆಪ್ಟೆಂಬರ್ 19 ರಂದು ನಡೆದಿತ್ತು. ಅಪಘಾತದ ನಂತರ ಮಣ್ಣು ತೆಗೆಯುವ ಯಂತ್ರವನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದರು. ತೊಟ್ಟಮುಕ್ ಮೂಲದ ಸುಧೀಶ್ ಎಂಬವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಂತರ ಪೋಲೀಸರ ತನಿಖೆಯಲ್ಲಿ ಮಣ್ಣು ತೆಗೆಯುವ ಯಂತ್ರಕ್ಕೆ ವಿಮೆ ಸೇರಿದಂತೆ ಯಾವುದೇ ದಾಖಲೆಗಳು ಇಲ್ಲದಿರುವುದು ಪತ್ತೆಯಾಗಿದೆ. ಇದಾದ ಬಳಿಕ ಎಸ್‍ಐ ನೌಶಾದ್ ಅವರ ಸಹಕಾರದೊಂದಿಗೆ ಠಾಣೆಯಿಂದ ಮಣ್ಣು ತೆಗೆಯುವ ಯಂತ್ರವನ್ನು ಅಕ್ರಮವಾಗಿ ಸಾಗಿಸಲಾಯಿತು. ಪ್ರಕರಣದ ಇತರ ಆರೋಪಿಗಳನ್ನು ಪೋಲೀಸರು ಈ ಹಿಂದೆ ಬಂಧಿಸಿದ್ದರು.