ಕಾಸರಗೋಡು: ಅಯೋಧ್ಯೆಯ ಶ್ರೀರಾಮ ಜನ್ಮಸ್ಥಾನದಲ್ಲಿ ನಿರ್ಮಾಣಗೊಂಡಿರುವ ಭವ್ಯ ಮಂದಿರದ ಗರ್ಭಗುಡಿಯಲ್ಲಿ ಜ.22 ರಂದು ನೂತನ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಕೋಟೆಕಣಿಯ ಶ್ರೀ ರಾಮನಾಥ ದೇವಸ್ಥಾನದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ವಿವಿ`À ಕಾರ್ಯಕ್ರಮಗಳು ನಡೆಯಲಿದೆ.
ಬೆಳಗ್ಗೆ 6 ಕ್ಕೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಶ್ರೀ ರಾಮನಾಥ ಸನ್ನಿಧಿಯಲ್ಲಿ ಮಹಾಗಣಪತಿ ಹೋಮ, 6.52ರಿಂದ ದೀಪಾರಾಧನೆ, ವಿವಿಧ ತಂಡಗಳಿಂದ ಭಜನೆ, ಮಧ್ಯಾಹ್ನ 12 ಕ್ಕೆ ಸಾಮೂಹಿಕ ರಾಮನಾಮ ತಾರಕ ಮಂತ್ರ ಪಠಣ, 1 ಕ್ಕೆ ಸನ್ನಿಧಿಯಲ್ಲಿ ಮಹಾಪೂಜೆ, ಪ್ರಸಾದ ವಿತರಣೆ, ಸಭಾ ಕಾರ್ಯಕ್ರಮ ಮತ್ತು ಅಯೋಧ್ಯೆಯಲ್ಲಿ ಕರ ಸೇವೆಯಲ್ಲಿ ಪಾಲ್ಗೊಂಡ ನವೀಂದ್ರ ಕುಮಾರ್ ಶೆಟ್ಟಿ, ಕೇಸರಿ ರವಿ, ಜಯರಾಮ ಎ, ಲೋಕೇಶ್ ಶೆಟ್ಟಿ, ಕಿರಣ್‍ಚಂದ್ರ ಕೆ.ಎಸ್. ಗೋಪಾಲಕೃಷ್ಣ, ತುಕಾರಾಮ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಸಮಾರಂಭದಲ್ಲಿ ಎನ್.ಆರ್.ಎ. ಬಾಲಕೃಷ್ಣ ಅಡಿಗ ಅಧ್ಯಕ್ಷತೆ ವಹಿಸುವರು. ಬಾಲಗೋಕುಲ ಕಾಸರಗೋಡು ಜಿಲ್ಲಾ ರಕ್ಷಾಧಿಕಾರಿ ಶಂಕರನಾರಾಯಣ ಭಟ್ ಮುಖ್ಯ ಭಾಷಣ ಮಾಡುವರು.
ಮಧ್ಯಾಹ್ನ 1.30 ರಿಂದ ಪ್ರಸಾದ ಭೋಜನ, 2 ರಿಂದ ಭಜನೆ, ಸಂಜೆ 6.20 ಕ್ಕೆ ಸಮಾರೋಪ ಸಮಾರಂಭ, ಸತ್ಸಂಗ, ದೀಪಾಲಂಕಾರ ನಡೆಯಲಿದೆ.