ಭುವನೇಶ್ವರ: ಒಡಿಶಾದ ಭುವನೇಶ್ವರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು (ಏಮ್ಸ್) ರಾಜ್ಯದ ಕೊರ್ಧಾ ಜಿಲ್ಲೆಯಲ್ಲಿಯ ತಂಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರಕ್ತದ ಚೀಲವನ್ನು ಗುರುವಾರ ಡ್ರೋನ್ ಮೂಲಕ ರವಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಭುವನೇಶ್ವರದ ಏಮ್ಸ್‌ನ 'ಡ್ರೋನ್ ಆರೋಗ್ಯ ಸೇವೆ'ಯ ಉದ್ಘಾಟನಾ ಹಾರಾಟವಾಗಿತ್ತು.
ಸ್ಕೈ ಏರ್ ಮೊಬಿಲಿಟಿ ಎಂಬ ಸಂಸ್ಥೆ ಡ್ರೋನ್ ಸೇವೆಯನ್ನು ಭುವನೇಶ್ವರ ಏಮ್ಸ್‌ಗೆ ಒದಗಿಸುತ್ತಿದೆ. ರೋಗಿಯೊಬ್ಬರಿಗಾಗಿ ರಕ್ತ ರವಾನಿಸಲಾಗಿದೆ. ತಂತ್ರಜ್ಞಾನವನ್ನು ಆರೋಗ್ಯ ಸೇವಾ ವ್ಯವಸ್ಥೆ ಜೊತೆ ಸಂಜೋಯಿಸುವ ವಿಚಾರದಲ್ಲಿ ಈ ಉಪಕ್ರಮವು ಮಹತ್ವದ ಮೈಲಿಗಲ್ಲಾಗಿದೆ. ಆರೋಗ್ಯ ಕೇಂದ್ರದಿಂದ ಹಿಂದಿರುಗುವಾಗ ರಕ್ತದ ಮಾದರಿಗಳನ್ನು ಈ ಡ್ರೋನ್ ಹೊತ್ತುತಂದಿದೆ ಎಂದು ಭುವನೇಶ್ವರದ ಏಮ್ಸ್‌ನ ಕಾರ್ಯಕಾರಿ ನಿರ್ದೇಶಕ ಆಶುತೋಷ್ ಬಿಸ್ವಾಸ್ ಹೇಳಿದ್ದಾರೆ.