ಮುಳ್ಳೇರಿಯ: ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ, ವೈವಿಧ್ಯಮಯ ಭತ್ತದ ತಳಿಗಳ ಸಂಗ್ರಾಹಕ ಸತ್ಯನಾರಾಯಣ ಬೆಳೇರಿ ಅವರನ್ನು ನಿವೃತ್ತ ವಾಯುಸೇನಾ ಅಧಿಕಾರಿ, ಮಾನವಹಕ್ಕು ಆಯೋಗದ ಜಿಲ್ಲಾಧ್ಯಕ್ಷ ತಿರುಮಲೇಶ್ವರ ಭಟ್ ಪಜ್ಜ ಅವರು ಬೆಳೇರಿ ಸ್ವಗೃಹದಲ್ಲಿ ಅಭಿನಂದಿಸಿ ಗೌರವಿಸಿದರು. ಮಾನವ ಜೀವನ ನೆಲೆಗೊಳ್ಳುವಲ್ಲಿ ಪ್ರಧಾನ ಪಾತ್ರವಹಿಸುವ ಭತ್ತ ಕೃಷಿಗೆ, ತಳಿ ಸಂರಕ್ಷಣೆಗೆ ಜೀವನ ಮುಡಿಪಾಗಿಟ್ಟಿರುವ ಸತ್ಯನಾರಾಯಣ ಬೆಳೇರಿ ಅವರ ಯಶೋಗಾಥೆ ಜಗತ್ತಿಗೆ ಮಾದರಿಯಾಗಿದ್ದು, ಅವರಿಗೆ ಒಲಿದುಬಂದಿರುವ ಪದ್ಮಶ್ರೀ ಪ್ರಶಸ್ತಿ ಯುವ ಸಮೂಹಕ್ಕೆ ಪ್ರೇರಣದಾಯಿ ಎಂದು ಈ ಸಂದರ್ಭ ತಿರುಮಲೇಶ್ವರ ಭಟ್ ಶುಭಹಾರೈಸಿದರು.