ಫ್ರಾಂಕ್‌ಫರ್ಟ್: ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆಗೊಳಿಸಲು ನೋವೊ ನಾರ್ಡಿಸ್ಕ್ ಕಂಪನಿಯ 'ವೆಗೋವಿ' ಔಷಧ ಬಳಕೆಗೆ ಯುರೋಪಿಯನ್ ಒಕ್ಕೂಟದ ಔಷಧ ನಿಯಂತ್ರಕವು ಈ ವಾರ ಅನುಮತಿ ನೀಡುವ ಸಾಧ್ಯತೆ ಇದೆ.
ಫ್ರಾಂಕ್‌ಫರ್ಟ್: ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆಗೊಳಿಸಲು ನೋವೊ ನಾರ್ಡಿಸ್ಕ್ ಕಂಪನಿಯ 'ವೆಗೋವಿ' ಔಷಧ ಬಳಕೆಗೆ ಯುರೋಪಿಯನ್ ಒಕ್ಕೂಟದ ಔಷಧ ನಿಯಂತ್ರಕವು ಈ ವಾರ ಅನುಮತಿ ನೀಡುವ ಸಾಧ್ಯತೆ ಇದೆ.
ನೋವೊ ನಾರ್ಡಿಸ್ಕ್ ಡ್ಯಾನಿಷ್ ಕಂಪನಿಯಾಗಿದ್ದು, ಅದರ 'ವೆಗೋವಿ' ಅನ್ನು ತೂಕ ಇಳಿಸುವ ಔಷಧವಾಗಿ ಬಳಸಲಾಗುತ್ತಿದೆ.
ಸ್ಥೂಲಕಾಯ ಹೊಂದಿರುವ ರೋಗಿಗಳ ತೂಕವನ್ನು ಶೇ 15ರಷ್ಟು ಇಳಿಸಲು 'ವೆಗೋವಿ' ನೆರವಾಗುತ್ತಿದೆ. ಅಲ್ಲದೆ ಅದು ಹೃದಯಾಘಾತ, ಪಾರ್ಶ್ವವಾಯು ಅಥವಾ ಹೃದಯ ಸಂಬಂಧಿ ಕಾಯಿಲೆಯಿಂದ ಆಗುವ ಸಾವಿನ ಸಂಭವವನ್ನು ಶೇ 20ರಷ್ಟು ಕಡಿಮೆಗೊಳಿಸುತ್ತದೆ ಎಂಬುದು ಪ್ರಯೋಗಗಳಿಂದ ಗೊತ್ತಾಗಿದೆ.