ಕಾಸರಗೋಡು: ವಿಕಲಚೇತನರ ಕ್ಷೇತ್ರದಲ್ಲಿ ವಿನೂತನ ಹಾಗೂ ಪರಿಣಾಮಕಾರಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಜಾರಿಗೆ ತರಲಾಗುತ್ತಿರುವ ಐ-ಲೀಡ್ ಯೋಜನೆ ರಚನೆಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಎಸ್ ಎಸ್ ಕೆ ಜಿಲ್ಲಾ ಯೋಜನಾ ಕಛೇರಿಯ ಸಮ್ಮೇಳನ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ - ಸಮಗ್ರ ಶಿಕ್ಷ ಣ ಕೇರಳ ವತಿಯಿಂದ ಆಯೋಜಿಸಿದ್ದ ಕಾರ್ಯಾಗಾರವನ್ನು ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ ಕೈನಿಕರ ಉದ್ಘಾಟಿಸಿದರು. ತಿರುವನಂತಪುರದ ಸಹಾಯಕ ಕಲೆಕ್ಟರ್ ಅಖಿಲ್ ವಿ ಮೆನನ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ವಿ.ಎಸ್.ಬಿಜುರಾಜ್ ಅಧ್ಯಕ್ಷ ತೆ ವಹಿಸಿದ್ದರು. ಐ ಲೀಡ್ ಜಿಲ್ಲಾ ಸಂಯೋಜಕ ಸೌರವ್ ಸುರೇಂದ್ರನ್ ಯೋಜನೆ ವಿವರಿಸಿದರು. ಎಸ್ ಎಸ್ ಕೆ ಜಿಲ್ಲಾ ಕಾರ್ಯಕ್ರಮಾಧಿಕಾರಿಗಳಾದ ಡಿ.ನಾರಾಯಣ, ಟಿ.ಪ್ರಕಾಶನ್, ಎಂ.ಎಂ.ಮಧುಸೂದನನ್, ಕೆ.ಪಿ.ರಂಜಿತ್ ಹಾಗೂ ಬ್ಲಾಕ್ ಯೋಜನಾ ಸಂಯೋಜಕರಾದ ಕೆ.ಎಂ.ದಿಲೀಪ್ ಕುಮಾರ್, ಟಿ.ಕಾಸಿಂ, ಪಿ.ರಾಜಗೋಪಾಲನ್, ಬಿ.ಗಿರೀಶನ್ ಮಾತನಾಡಿದರು.
ಕಾರ್ಯಾಗಾರದ ಮೂಲಕ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳು, ವಿವಿಧ ಇಲಾಖೆಗಳು ಹಾಗೂ ಇತರೆ ಸಂಸ್ಥೆಗಳ ಸಹಕಾರದೊಂದಿಗೆ ವಿಕಲಚೇತನರ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಬಹುದಾದ ವಿನೂತನ ಮತ್ತು ಪ್ರಾಯೋಗಿಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಐ-ಲೀಡ್ ಕಾರ್ಯಾಗಾರದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ಅಗತ್ಯ ಸೂಚನೆಗಳನ್ನು ಮುಂದಿರಿಸಲಾಯಿತು.