ಕಾಸರಗೋಡು: ಕಾಸರಗೋಡು ನಗರಸಭೆ ಹಾಗೂ ಸಾಮಾಜಿಕ ಭದ್ರತಾ ಮಿಷನ್ ಜಂಟಿಯಾಗಿ ನಡೆಸುತ್ತಿರುವ ಹಿರಿಯ ನಾಗರಿಕರಿಗಾಗಿ ಆರೋಗ್ಯ ರಕ್ಷಣಾ ಯೋಜನೆಯಾದ ವಯೋಮಿತ್ರಂ ಯೋಜನೆಯ ನೂತನ ಚಿಕಿತ್ಸಾಲಯ ಬೀರಂತಬೈಲು ಅಂಗನವಾಡಿಯಲ್ಲಿ ಶನಿವಾರ ಆರಂಭಗೊಂಡಿದೆ. ನಗರಸಭೆ ಅಭಿವೃದ್ಧಿ ಮತ್ತು ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ಬಾಸ್ ಬೇಗಂ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ, ಉಪಾಧ್ಯಕ್ಷ ಶಂಸೀ ದಿ ಫಿರೋಜ್ ಉದ್ಘಾಟಿಸಿದರು. ಆರೋಗ್ಯ ಸಮಿತಿ ಅಧ್ಯಕ್ಷ ಖಾಲಿದ್ ಪೂಚ್ಚಕ್ಕಾಡ್, ವಾರ್ಡ್ ಕೌನ್ಸಿಲರ್ ವೀಣಾಕುಮಾರಿ, ಕೆಎಸ್‍ಎಸ್‍ಎಂ ಜಿಲ್ಲಾ ಸಹ ಲೆಕ್ಕ ಪರಿಶೋಧಕ ಮುಹಮ್ಮದ್ ಅಶ್ರಫ್ ಉಪಸ್ಥಿತರಿದ್ದರು. ತಿಂಗಳ ಎಲ್ಲಾ ಶನಿವಾರದಂದು ಇಲ್ಲಿ ವೆಯೋಮಿತ್ರಂ ಸೇವೆ ಲಭ್ಯವಿದೆ. ವಯೋಮಿತ್ರಂ ವೈದ್ಯಾಧಿಕಾರಿ ಡಾ.ಆಸಿಯಾ ಸ್ವಾಗತಿಸಿ ವಂದಿಸಿದರು.