ನವದೆಹಲಿ: ಇಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫ್ರಾನ್ಸ್ ಪ್ರಜೆಯೊಬ್ಬರನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿಯೊಬ್ಬರು ಪ್ರಾಣಾಪಾಯದಿಂದ ಪಾರು ಮಾಡಿರುವ ಘಟನೆ ಜನವರಿ 26ರಂದು ನಡೆದಿದೆ ಎಂದು ಸೇನೆಯ ವಕ್ತಾರರು ಭಾನುವಾರ ತಿಳಿಸಿದ್ದಾರೆ.

ಬೆರ್‌ಟ್ರ್ಯಾಂಡ್ ಪ್ಯಾಟ್ರಿಕ್ ಎಂಬುವವರು ದೆಹಲಿಯಿಂದ ಪ್ಯಾರಿಸ್‌ಗೆ ಹೊರಟಿದ್ದರು. ಭದ್ರತಾ ತಪಾಸಣೆಗಾಗಿ ಸರದಿ ಸಾಲಿನಲ್ಲಿ ನಿಂತಿದ್ದ ವೇಳೆ ಪ್ರಜ್ಞೆ ತಪ್ಪಿ ಬಿದ್ದರು. ಎಕ್ಸ್ ರೇ ತಪಾಸಣೆ ಯಂತ್ರದ ಬಳಿಯಿದ್ದ ಸಿಐಎಸ್‌ಎಫ್‌ನ ಸಬ್ ಇನ್‌ಸ್ಪೆಕ್ಟರ್ ಪುನೀತ್ ಕುಮಾರ್ ತಿವಾರಿ ಅವರು ಕೂಡಲೇ ಪ್ಯಾಟ್ರಿಕ್ ಅವರ ಬಳಿಗೆ ಧಾವಿಸಿ, ಸಿಪಿಆರ್ (ಹೃದಯ ಪುನಃಶ್ಚೇತನ) ಚಿಕಿತ್ಸೆ ನೀಡಿದರು. ಕೆಲ ಸಮಯದಲ್ಲಿಯೇ ಪ್ಯಾಟ್ರಿಕ್ ಎಚ್ಚರಗೊಂಡರು ಎಂದು ವಕ್ತಾರರು ತಿಳಿಸಿದ್ದಾರೆ.
ಬಳಿಕ ವಿಮಾನ ನಿಲ್ದಾಣದ ವೈದ್ಯರು ಪ್ಯಾಟ್ರಿಕ್ ಅವರ ತಪಾಸಣೆ ನಡೆಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಅವರು ವಿಮಾನ ಪ್ರಯಾಣ ಮುಂದುವರೆಸಬಹುದು ಎಂದು ತಿಳಿಸಿದರು.
'ಸಿಐಎಸ್‌ಎಫ್ ಸಿಬ್ಬಂದಿಯ ಚುರುಕಿನ ಕ್ರಮದಿಂದಾಗಿ ಅಮೂಲ್ಯ ಜೀವವೊಂದು ಉಳಿಯಿತು' ಎಂದು ಅಧಿಕಾರಿಗಳು ಶ್ಲಾಘಿಸಿದ್ದಾರೆ.