ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಪಾಂಡೇಲು ಶಿವಶಂಕರ ಭಟ್ ಕಿಳಿಂಗಾರು ಇವರ ನೇತೃತ್ವದಲ್ಲಿ ಭಾಗವತ ಸಪ್ತಾಹ ಆರಂಭವಾಯಿತು. ಬುಧವಾರ ಬೆಳಗ್ಗೆ ಶ್ರೀದೇವರ ಪ್ರತಿಷ್ಠೆ, ಪೂಜೆ ನಡೆಯಿತು. ಕೂಡ್ಲು ನಾಗೇಂದ್ರ ಭಟ್ ಅವರು ಭಾಗವತ ಪಾರಾಯಣ ನಡೆಸಿಕೊಟ್ಟರು. ಜ.19ರ ತನಕ ಮಧ್ಯಾಹ್ನ ಪಾರಾಯಣದ ಅಂಗವಾಗಿ 12 ಗಂಟೆಗೆ ಶ್ರೀಕೃಷ್ಣನಿಗೆ ಪೂಜೆ, 12.30ಕ್ಕೆ ಶ್ರೀ ಶಂಕರನಾರಾಯಣ ದೇವರ ಪೂಜೆ, ಮಹಾಪೂಜೆ ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿರುವುದು.
ಜೀರ್ಣೋದ್ಧಾರದ ಅಂಗವಾಗಿ ನಡೆಸಿದ ತಾಂಬೂಲ ಪ್ರಶ್ನೆ ಚಿಂತನೆಗಳ ಪ್ರಕಾರ ಕಂಡು ಬಂದ ದೋಷಗಳ ಪ್ರಾಯಶ್ಚಿತ್ತಕ್ಕಾಗಿ ಮಂಗಳವಾರ ರಾತ್ರಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ವಿವಿಧ ತಾಂತ್ರಿಕ ಕ್ರಿಯೆಗಳು ನಡೆದುವು. ಜ್ಯೋತಿಷ್ಯರಾಗಿ ನವನೀತ ಪ್ರಿಯ ಕೈಪ್ಪಂಗಳ ಸಹಕರಿಸಿದರು.