ಕುಂಬಳೆ: ಹೇರೂರು ಮೀಪಿರಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಸುವರ್ಣ ಮಹೋತ್ಸವ ಆಚರಣೆ ಶುಕ್ರವಾರ ಆರಂಭಗೊಂಡಿದ್ದು, ಇಂದು( ಶನಿವಾರ) ಸಮಾರೋಪ ನಡೆಯಲಿದೆ.
75 ಶಿಕ್ಷಕರು ಮತ್ತು 2000 ವಿದ್ಯಾರ್ಥಿಗಳು ಭೇಟಿಯಾಗುವ ಕಾರ್ಯಕ್ರಮದಲ್ಲಿ ನಟ ಉಣ್ಣಿರಾಜ್ ಚೆರುವತ್ತೂರ್ ಶನಿವಾರ ಉಪಸ್ಥಿತರಿರುವರು. ಶನಿವಾರದ ಸಾಂಸ್ಕøತಿಕ ಸಮ್ಮೇಳನವನನು ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸುವರು. ಸಂಜೆ ಮೆಗಾ ಒಪ್ಪನ, ರಾತ್ರಿ ಬೆಳದಿಂಗಲ ರಾತ್ರಿ ವಿಶೇಷ ಪ್ರದರ್ಶನ, ಕ್ರೀಡಾ ಸ್ಪರ್ಧೆ ನಡೆಯಲಿದೆ.
ಈ ಬಗ್ಗೆ ಕುಂಬಳೆ ಪ್ರೆಸ್ ಪೋರಂನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಂಗಲ್ಪಾಡಿ ಪಂಚಾಯಿತಿ ಸದಸ್ಯ ಮಜೀದ್ ಪಚ್ಚಂಬಳ, ಸಂಘಟನಾ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ ಮೀಪಿರಿ, ಪಿ.ಟಿ.ಎ ಅಧ್ಯಕ್ಷ ಪಿ.ಎನ್.ಮಹಮ್ಮದ್, ಒಎಸ್ ಎ ಅಧ್ಯಕ್ಷ ಉಮ್ಮರ್ ಬಾಕಿಮೂಲೆ, ಉಪಾಧ್ಯಕ್ಷ ಹಸನ್ ಇಚ್ಲಂಗೋಡು, ಶಾಲಾ ಸಿಬ್ಬಂದಿ ಕಾರ್ಯದರ್ಶಿ ಕೆ.ವಿ.ಶ್ರೀನಿವಾಸನ್ ಉಪಸ್ಥಿತರಿದ್ದರು.