ಕಣ್ಣೂರು: ಕೇಂದ್ರ ಕಾರಾಗೃಹದಿಂದ ಕೈದಿಯೊಬ್ಬ ಜಿಗಿದು ಪರಾರಿಯಾದ ಘಟನೆ ನಡೆದಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದ ಕೊಯೊಟೆ ಮೂಲದ ಹರ್ಷದ್ ಕಾಲ್ಕಿತ್ತ ಅಪರಾಧಿ.
ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ದಿನಪತ್ರಿಕೆ ಸಂಗ್ರಹಿಸಲು ಹೋಗಿದ್ದ ಹರ್ಷದ್ ಬೈಕ್ ಹಿಂಬದಿ ಹತ್ತಿ ಕಣ್ಮರೆಯಾದ. ಘಟನೆಯಲ್ಲಿ ಜೈಲು ಅಧಿಕಾರಿಗಳ ಕಡೆಯಿಂದ ಗಂಭೀರ ವೈಫಲ್ಯ ಕಂಡುಬಂದಿದೆ.ತನಿಖೆ ನಡೆಯುತ್ತಿದೆ.