ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ಪ್ರತಿಪಕ್ಷ ಸಂಘಟನೆ ನೌಕರರು ಬುಧವಾರ ರಾಜ್ಯವ್ಯಾಪಕ ಮುಷ್ಕರ ಹಮ್ಮಿಕೊಂಡಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಬಹುತೇಕ ಯಶಸ್ವಿಯಾಗಿದೆ. ಬಾಕಿಯಿರುವ ತುಟ್ಟಿಭತ್ತೆ ಮಂಜೂರುಗೊಳಿಸಬೇಕು, ಲೀವ್ ಸರಂಡರ್ ಮರುಸ್ಥಾಪಿಸಬೇಕು, ಪರಿಷ್ಕøತ ವೇತನ ಮಂಜೂರುಮಾಡಬೇಕು, ಪಾಲುದಾರಿಕಾ ಪಿಂಚಣಿ ವ್ಯವಸ್ಥೆ ಹಿಂತೆಗೆಯಬೇಕು ಮುಂತಾದ ಬೇಡಿಕೆ ಮುಂದಿರಿಸಿ ಮುಷ್ಕರ ಆಯೋಜಿಸಲಾಗಿತ್ತು.
ಫೆಡರೇಶನ್ ಆಫ್ ಎಂಪ್ಲಾಯೀಸ್ ಆ್ಯಂಡ್ ಟೀಚರ್ಸ್ ಆರ್ಗನೈಸೇಶನ್ (ಎಫ್‍ಇಟಿಒ)ವತಿಯಿಂದ ಮುಷ್ಕರ ನಡೆಸಲಾಯಿತು. ಸರ್ಕಾರಿ ಕಚೇರಿಗಳಲ್ಲಿ ಶೇ.70ರಷ್ಟು ನೌಕರರು ಮುಷ್ಕರದಲ್ಲಿ ಪಾಲ್ಗೊಮಡಿದ್ದರು. ಕೆಲವು ಶಾಲೆಗಳ ಕಾರ್ಯನಿರ್ವಹಣೆಯೂ ಸ್ಥಗಿತಗೊಂಡಿತ್ತುಸಿವಿಲ್ ಸ್ಟೇಷನ್ ನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯನ್ನು ಗಜೆಟೆಡ್ ಅಧಿಕಾರಿಗಳ ಸಂಘಟನೆ ರಾಜ್ಯ ಸಮಿತಿ ಉಪಾಧ್ಯಕ್ಷ ಡಾ. ವಿಶ್ವನಾಥನ್ ಉದ್ಘಾಟಿಸಿ ಮಾತನಾಡಿ, ಡಯಸ್‍ನಸ್ ಸೇರಿದಂತೆ ಎಡರಂಗಪರ ಸಂಘಟನೆಗಳ ಬೆದರಿಕೆ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿರುವುದು ಸರ್ಕಾರಕ್ಕೆ ನಿಡಿರುವ ಎಚ್ಚರಿಕೆಯಾಗಿದೆ ಎಂದು ತಿಳಿಸಿದರು.
'ಫೆಟೊ'ಜಿಲ್ಲಾಧ್ಯಕ್ಷ ಎಂ. ರಂಜಿತ್ ಅಧ್ಯಕ್ಷತೆ ವಹಿಸಿದ್ದರು. ಪಿ.ಪೀತಾಂಬರನ್, ಸಿ. ವಿಜಯನ್, ಕೆ. ಪ್ರಭಾಕರ ನಾಯರ್, ವೆಂಕಪ್ಪ ಶೆಟ್ಟಿ, ರಾಜೇಂದ್ರ ಕುಂಟಾರ್, ಕೆ.ರಾಜನ್, ರಂಜಿತ್ ಕೆ, ಸತೀಶ್ ಶೆಟ್ಟಿ, ಸುರೇಖಾ, ಕೃಷ್ಣನ್ ಟಿ ಮತ್ತು ಶ್ಯಾಮ್ ಪ್ರಸಾದ್ ಉಪಸ್ಥಿತರಿದ್ದರು.