ಗಾಜಾಪಟ್ಟಿ: ಪ್ಯಾಲೆಸ್ಟೀನ್ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಮೇಲೆ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಬಾಂಬ್ ದಾಳಿ ನಡೆಸಿವೆ ಎನ್ನಲಾದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಗಾಜಾಪಟ್ಟಿ: ಪ್ಯಾಲೆಸ್ಟೀನ್ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಮೇಲೆ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಬಾಂಬ್ ದಾಳಿ ನಡೆಸಿವೆ ಎನ್ನಲಾದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಮಧ್ಯ ಗಾಜಾಪಟ್ಟಿಯ ಖಾನ್ ಯೂನಿಸ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಪ್ಯಾಲೆಸ್ಟೀನ್ ವಿಶ್ವವಿದ್ಯಾಲಯದ ಕ್ಯಾಂಪಸ್ ಎಂದು ಹೇಳಲಾಗುವ ಕಟ್ಟಡ ಸ್ಫೋಟಕ್ಕೊ ಮೊದಲು ಪಾಳು ಬಿದ್ದ ಕಟ್ಟಡ ಎಂಬಂತೆ ಕಾಣುತ್ತದೆ. ಕಟ್ಟಡದ ಒಳಗ ಬಾಂಬ್‌ಗಳನ್ನು ಇಟ್ಟು ಸ್ಫೋಟಿಸಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಹೊರಗಿನಿಂದ ಯಾವುದೇ ಕ್ಷಿಪಣಿ ದಾಳಿ ನಡೆದಿಲ್ಲ ಎಂಬುದು ವಿಡಿಯೊ ನೋಡಿದರೆ ತಿಳಿಯುತ್ತದೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಇಸ್ರೇಲ್ ಪಡೆಗಳು ಈ ದಾಳಿ ಮಾಡಿವೆ ಎನ್ನಲಾಗುತ್ತಿದೆ. ಈ ಘಟನೆ ಕುರಿತಂತೆ ಅಮೆರಿಕವು ಸ್ಪಷ್ಟನೆ ನೀಡುವಂತೆ ಇಸ್ರೇಲ್ ರಾಷ್ಟ್ರವನ್ನು ಕೋರಿದೆ.
ಇಲ್ಲಿಯವರೆಗೆ ಈ ಘಟನೆ ಬಗ್ಗೆ ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.