HEALTH TIPS

ರಾಮ ಪ್ರಾಣ ಪ್ರತಿಷ್ಠಾಪನೆ ದಿನ ದೇಶದ ವಿವಿಧ ಭಾಗಗಳ ಸಂಗೀತ ಕಾರ್ಯಕ್ರಮ

               ಯೋಧ್ಯೆ: ಉತ್ತರ ಪ್ರದೇಶದ ಪಖವಾಜ್‌, ಕರ್ನಾಟಕದ ವೀಣೆಯಿಂದ ಹಿಡಿದು ತಮಿಳುನಾಡಿನ ಮೃದಂಗದವರೆಗೆ.. ಹೀಗೆ ದೇಶದ ವಿವಿಧ ಭಾಗಗಳ ಶಾಸ್ತ್ರೀಯ ಸಂಗೀತದ ವಾದ್ಯಗಳನ್ನು ರಾಮ ಪ್ರತಿಷ್ಠಾಪನೆ ದಿನದಂದು ನುಡಿಸಲಾಗುವುದು ಎಂದು ಮಂದಿರದ ಟ್ರಸ್ಟಿಗಳು ತಿಳಿಸಿದ್ದಾರೆ.

               ಜ.22ರಂದು ನಡೆಯುವ ವೈಭವದ ಸಮಾರಂಭದಲ್ಲಿ ಪ್ರದರ್ಶನ ನೀಡಲು ದೇಶದ ವಿವಿಧ ಭಾಗಗಳಿಂದ ಸಂಗೀತಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್‌ ತಿಳಿಸಿದ್ದಾರೆ.

              ಸಮಾರಂಭದಲ್ಲಿ ಉತ್ತರ ಪ್ರದೇಶದದ ಢೋಲಕ್‌ ವಾದಕರು, ಕರ್ನಾಟಕದ ವೀಣೆ ನುಡಿಸುವವರು, ಮಹಾರಾಷ್ಟ್ರದ ಸುಂದರಿ ವಾದಕರು, ಪಂಜಾಬ್‌ನಿಂದ ಅಲ್‌ಘೋಜಾ ವಾದಕರು, ಒಡಿಶಾದಿಂದ ಮದ್ದಳೆ ಬಾರಿಸುವವರು, ಮಧ್ಯಪ್ರದೇಶದ ಸಂತೂರ್ ವಾದಕರು, ಮಣಿಪುರದಿಂದ ಪಂಗ್ ನುಡಿಸುವವರು, ಅಸ್ಸಾಂನಿಂದ ನಗಡ ಹಾಗೂ ಕಲಿ ವಾದಕರು, ಛತ್ತೀಸಗಢದಿಂದ ತಂಬೂರಿ ಮೀಟುವವರು, ಬಿಹಾರದ ಪಖವಾಜ್ ನುಡಿಸುವವರು, ದೆಹಲಿಯಿಂದ ಶಹನಾಯಿ ವಾದಕರು, ರಾಜಸ್ಥಾನದ ರಾವನಹತ ನುಡಿಸುವವರು, ಪಶ್ಚಿಮ ಬಂಗಾಳದ ಶ್ರಿಖೋಲ್ ಹಾಗೂ ಸರೋದ್‌ ವಾದಕರು, ಆಂಧ್ರಪ್ರದೇಶದ ಘಟಂ ನುಡಿಸುವವರು, ಜಾರ್ಖಂಡ್‌ನ ಸಿತಾರ್ ವಾದಕರು, ತಮಿಳುನಾಡಿನ ನಾದಸ್ವರಂ ಹಾಗೂ ಮೃದಂಗ ಬಾರಿಸುವವರು ಮತ್ತು ಉತ್ತರಾಖಂಡದ ಹುಡ್ಕಾ ವಾದಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.

                ಯಾವುದೇ ವೈದಿಕ ವಿಧಿವಿಧಾನಗಳು ನಡೆಯದೇ ಇರುವ ವೇಳೆ ಹಾಗೂ ಅತಿಥಿಗಳು ಭಾಷಣ ಮಾಡದೇ ಇರುವ ವೇಳೆ ಇವರು ಸಂಗೀತ ನುಡಿಸಲಿದ್ದಾರೆ ಎಂದು ಹೇಳಿದ್ದಾರೆ.

ಅಪೂರ್ಣ ದೇಗುಲವನ್ನು ಉದ್ಘಾಟನೆ ಮಾಡಲಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ನಾನು ಯಾವುದೇ ಟೀಕೆಗಳಿಗೆ ಉತ್ತರಿಸುವುದಿಲ್ಲ' ಎಂದು ಹೇಳಿದ್ದಾರೆ.

               ಮಧ್ಯಾಹ್ನ 12.20ಕ್ಕೆ ಪ್ರಾಣ ಪ್ರತಿಷ್ಠಾಪನೆ ಆರಂಭವಾಗಲಿದ್ದು, 1 ಗಂಟೆ ಹೊತ್ತಿಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

               ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್‌ ಭಾಗವತ್‌, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ದೇಗುಲ ಟ್ರಸ್ಟ್‌ನ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್‌ ದಾಸ್‌ ಅವರ ಸಮ್ಮುಖದಲ್ಲಿ ಸಮಾರಂಭವು ನಡೆಯಲಿದೆ. ಸುಮಾರು 8 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

               ಆಯ್ಕೆಯಾದ ಸಂಗೀತಗಾರರು ತಮ್ಮ ಪ್ರದೇಶದ ಭಾರತೀಯ ಸಂಪ್ರದಾಯದ ವಿವಿಧ ರೀತಿಯ ವಾದ್ಯಗಳನ್ನು ನುಡಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries