ಮಧೂರು: ಮಧೂರು ಗ್ರಾ.ಪಂ.ವ್ಯಾಪ್ತಿಯ ಚೇನಕ್ಕೋಡಿನಲ್ಲಿರುವ ಪಾಡಶೇಕರ ಕೆರೆ(ಕೃಷಿ ಸಮಿತಿ ಕೆರೆ) ಮೇಲ್ದರ್ಜೆಗೇರಿಸುವ ಯೋಜನೆಗೆ ಪ್ರಸ್ತಾವನೆ ನೀಡುವಂತೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಸೂಚನೆ ನೀಡಿದ್ದಾರೆ.
ಮಧೂರು ಗ್ರಾಮ ಪಂಚಾಯಿತಿಯ ಪ್ರಸ್ತಾವನೆ ಸ್ವೀಕರಿಸಿದ ಜಿಲ್ಲಾಧಿಕಾರಿ ಅವರು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಮೊತ್ತವನ್ನು ವಿನಿಯೋಗಿಸಲು ಸೂಚಿಸಿದರು. ಪಾಡಶೇಖರ ಬಳಿಯ ಮಧುವಾಹಿನಿ ನದಿಯ ಚೆಕ್ ಡ್ಯಾಂಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ನಾಲೆಗಳ ಮಣ್ಣು ತೆಗೆದು ಭತ್ತದ ಗದ್ದೆಗೆ ನೀರು ಹಾಯಿಸುವ ಕಾಮಗಾರಿ ಆರಂಭಿಸುವಂತೆ ಜಿಲ್ಲಾಧಿಕಾರಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಭೇಟಿಯು ಜಲಶಕ್ತಿ ಅಭಿಯಾನದ ಚಟುವಟಿಕೆಗಳ ಭಾಗವಾಗಿದೆ.
ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಉಪಾಧ್ಯಕ್ಷೆ ಎಂ.ಸ್ಮಿಜಾ, ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ರಾಧಾಕೃಷ್ಣ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಗಟ್ಟಿ, ಜಿಲ್ಲಾ ಅಂತರ್ಜಲ ಇಲಾಖೆ ಅಧಿಕಾರಿ ರತೀಶ್, ಉಪ ಕೃಷಿ ನಿರ್ದೇಶಕ ವಿಷ್ಣು ನಾಯರ್, ಪ್ರಧಾನ ಕೃಷಿ ಅಧಿಕಾರಿ ಮಿನಿ, ಮಧೂರು ಕೃಷಿ ಅಧಿಕಾರಿ ಅಸ್ಮಿನಾ, ಸಹಾಯಕ ಕೃಷಿ ಅಧಿಕಾರಿ ಬಿ.ಮಧುಸೂದನನ್, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪಿ.ಟಿ.ಸಂಜೀವ್, ಸಹಾಯಕ ಕಾರ್ಯಪಾಲಕ ಅಭಿಯಂತರ ಎ.ಅನೂಪ್, ಸಹಾಯಕ ಅಭಿಯಂತರ ನಿವಿಯಾ ಜಾರ್ಜ್, ಚೆನಕೋಡು ಪಾಡಶೇಖರ ಸಮಿತಿ ಅಧ್ಯಕ್ಷ ಶ್ರೀಧರ ಪಾಟಾಳಿ, ಕಾರ್ಯದರ್ಶಿ ಐತ್ತಪ್ಪ ಗಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.