ಮಧೂರು: ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ವರ್ಷಪ್ರತಿಯಂತೆ ಆಚರಿಸುವ ಮಕರ ಸಂಕ್ರಮಣ ಉತ್ಸವ ಹಾಗೂ ಸತ್ಯನಾರಾಯಣ ಪೂಜೆ ಶ್ರೀ ಮಠದಲ್ಲಿ ನೆರವೇರಿತು.
ಶ್ರೀ ಮಠದ ಪ್ರಧಾನ ಅರ್ಚಕ ವಾಸುದೇವ ಆಚಾರ್ಯ ಅವರ ನೇತೃತ್ವದಲ್ಲಿ ಅರ್ಚಕರಾದ ಜನಾರ್ದನ ಆಚಾರ್ಯ, ಮಂಜೇಶ್ ಆಚಾರ್ಯ, ಪ್ರಕಾಶ್ ಆಚಾರ್ಯ, ಮೌನೇಶ ಆಚಾರ್ಯ ಅವರ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮ ಜರುಗಿತು. ನಂತರ ದೇವತೆಗಳಿಗೆ ವಿಶೇಷ ತಂಬಿಲ ಸೇವೆ ನೆರವೇರಿತು.