ತ್ರಿಶೂರ್: ತ್ರಿಶೂರ್‍ನ ಲೂಡ್ರ್ಸ್ ಕ್ಯಾಥೆಡ್ರಲ್ ಚರ್ಚ್‍ನಲ್ಲಿ ಸುರೇಶ್ ಗೋಪಿ ಅವರು ಅಲ್ಲಿಯ ಕ್ರೈಸ್ತ ದೇವತೆಗೆ ಐದೂವರೆ ಪಪನ್ ಚಿನ್ನದ ಕಿರೀಟವನ್ನು ನಿನ್ನೆ ಅರ್ಪಿಸಿದರು.
ಪುತ್ರಿ ಭಾಗ್ಯಳ ವಿವಾಹಕ್ಕೂ ಮುನ್ನ ಚಿನ್ನದ ಕಿರೀಟವನ್ನು ಅರ್ಪಿಸಲಾಯಿತು. ಲೂರ್ದ್ ಕ್ಯಾಥೆಡ್ರಲ್ ಹಬ್ಬದ ದಿನದಂದು ಚರ್ಚ್ ತಲುಪಿ ಚಿನ್ನದ ಕಿರೀಟವನ್ನು ನೀಡುವುದಾಗಿ ಸುರೇಶ್ ಗೋಪಿ ಅಧಿಕಾರಿಗಳಿಗೆ ಈ ಹಿಂದೆ ತಿಳಿಸಿದ್ದರು. ಅದನ್ನು ಸೋಮವಾರ ನೆರವೇರಿಸಿದರು.
ಸುರೇಶ್ ಗೋಪಿ ಅವರು ಸೋಮವಾರ ಬೆಳಗ್ಗೆ ಕುಟುಂಬ ಸಮೇತ ಚರ್ಚ್ ತಲುಪಿದ್ದರು. ಪತ್ನಿ ರಾಧಿಕಾ, ಮದುವೆಯಾಗಲಿರುವ ಹಿರಿಯ ಮಗಳು ಭಾಗ್ಯ ಹಾಗೂ ಎರಡನೇ ಪುತ್ರಿ ಭಾವಿನಿ ಜೊತೆಗಿದ್ದರು. ಚರ್ಚ್‍ನಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುರೇಶ್ ಗೋಪಿ ಪುತ್ರಿ ಭಾಗ್ಯ ಸುರೇಶ್ ಹಾಗೂ ಉದ್ಯಮಿ ಶ್ರೇಯಸ್ ಮೋಹನ್ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಗುರುವಾಯೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗಿಯಾಗಿದ್ದಾರೆ.