ಗಿರ್ ಸೋಮನಾಥ: ಜಿಲ್ಲೆಯ ಸೋಮನಾಥ ದೇವಸ್ಥಾನದ ಹಿಂಭಾಗದಲ್ಲಿರುವ, ಅಂದಾಜು ಮೂರು ಹೆಕ್ಟೇರ್ ಪ್ರದೇಶದಲ್ಲಿನ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ಶನಿವಾರ ನಡೆಯಿತು.
ಗಿರ್ ಸೋಮನಾಥ: ಜಿಲ್ಲೆಯ ಸೋಮನಾಥ ದೇವಸ್ಥಾನದ ಹಿಂಭಾಗದಲ್ಲಿರುವ, ಅಂದಾಜು ಮೂರು ಹೆಕ್ಟೇರ್ ಪ್ರದೇಶದಲ್ಲಿನ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ಶನಿವಾರ ನಡೆಯಿತು.
ಈ ಪ್ರದೇಶವು ದೇವಸ್ಥಾನ ಟ್ರಸ್ಟ್ ಮತ್ತು ರಾಜ್ಯ ಸರ್ಕಾರಕ್ಕೆ ಸೇರಿದ್ದು, ಇಲ್ಲಿ ನಿರ್ಮಿಸಲಾಗಿರುವ ಮನೆ ಹಾಗೂ ಇತರ ನಿರ್ಮಾಣಗಳನ್ನು ತೆರವುಗೊಳಿಸಲಾಯಿತು ಎಂದು ಜಿಲ್ಲಾಧಿಕಾರಿ ಹರಜಿ ವಾಧ್ವಾನಿಯಾ ತಿಳಿಸಿದ್ದಾರೆ.
'ಈ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ 21 ಮನೆಗಳು ಹಾಗೂ 153 ಗುಡಿಸಲುಗಳನ್ನು ತೆರವುಗೊಳಿಸಲಾಗಿದೆ' ಎಂದು ತಿಳಿಸಿದ್ದಾರೆ. 100 ಕಂದಾಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ತೆರವು ಕಾರ್ಯಾಚರಣೆಗೆ ಭಾರಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.
ಅರಬ್ಬಿ ಸಮುದ್ರದ ಕರಾವಳಿ ಪಟ್ಟಣ ವೇರಾವಲ್ ಬಳಿಯ ಪ್ರಭಾಸ್ ಪಾಟನ್ ಎಂಬಲ್ಲಿ ಸೋಮನಾಥ ದೇವಾಲಯವಿದೆ. ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ, ಈ ದೇವಾಲಯದಲ್ಲಿರುವ ಸೋಮನಾಥ ಮೊದಲನೆಯ ದೃವಸ್ಥಾನ ಎಂಬ ನಂಬಿಕೆ ಇದ್ದು, ಇದು ಪ್ರಸಿದ್ಧ ತೀರ್ಥಯಾತ್ರೆ ಮತ್ತು ಪ್ರವಾಸಿ ಸ್ಥಳವೂ ಆಗಿದೆ.