ತ್ರಿಶೂರ್: ಮಹಿಳಾ ಮೀಸಲು ಮಸೂದೆಗಳ ಜಾರಿ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ವಿಳಂಬ ಧೋರಣೆ ಅನುಸರಿಸಿದವು. ಆದರೂ, ಬಿಜೆಪಿಯು ಮಹಿಳೆಯರ ಸಬಲೀಕರಣಕ್ಕಾಗಿ ಮಸೂದೆಯನ್ನು ಅಂಗೀಕರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತ್ರಿಶೂರ್: ಮಹಿಳಾ ಮೀಸಲು ಮಸೂದೆಗಳ ಜಾರಿ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ವಿಳಂಬ ಧೋರಣೆ ಅನುಸರಿಸಿದವು. ಆದರೂ, ಬಿಜೆಪಿಯು ಮಹಿಳೆಯರ ಸಬಲೀಕರಣಕ್ಕಾಗಿ ಮಸೂದೆಯನ್ನು ಅಂಗೀಕರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಗರದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ, ನಾರಿ ಶಕ್ತಿ ವಂದನಾ ಅಭಿಯಾನ ಇದೀಗ ಕಾನೂನಾಗಿ ಬದಲಾಗಿದೆ.
'ಸ್ವಾತಂತ್ರ್ಯಾನಂತರ ಎಡಪಂಥೀಯ ಕಾಂಗ್ರೆಸ್ ಸರ್ಕಾರ ನಮ್ಮ ಮಹಿಳೆಯರ ಸಾಮರ್ಥ್ಯನ್ನು ದುರ್ಬಲಗೊಳಿಸಿರುವುದು ವಿಷಾದನೀಯ. ಕಾಂಗ್ರೆಸ್ ಹಾಗೂ ಇತರ ಪಕ್ಷಗಳು, ಮಹಿಳೆಯರಿಗೆ ಅಧಿಕಾರ ನೀಡುವ ಮೀಸಲು ಮಸೂದೆಯು ಲೋಕಸಭೆಯಲ್ಲಿ ಶೀಘ್ರ ಜಾರಿಯಾಗದಂತೆ ಮಾಡಿದವು. ಆದಾಗ್ಯೂ, ನಾರಿ ಶಕ್ತಿ ವಂದನಾ ಅಭಿಯಾನ ಇದೀಗ ಕಾನೂನು ಆಗಿದೆ. ಮೋದಿ ತಮ್ಮ ಬದ್ಧತೆ ಪೂರೈಸಿದ್ದಾರೆ' ಎಂದು ತಿಳಿಸಿದ್ದಾರೆ.
ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಪ್ರಗತಿಯು ರಾಷ್ಟ್ರೀಯ ಬೆಳವಣಿಗೆಯನ್ನು ಖಾತ್ರಿಪಡಿಸಲಿದೆ ಎಂದು ಪ್ರತಿಪಾದಿಸಿರುವ ಪ್ರಧಾನಿ, ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಉಲ್ಲೇಖಿಸಿ 'ಮೋದಿಯ ಗ್ಯಾರಂಟಿ'ಗಳ ಸುತ್ತ ಚರ್ಚೆ ನಡೆಯುತ್ತಿದೆ ಎಂದು ಒತ್ತಿ ಹೇಳಿದ್ದಾರೆ.
ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್‌ನಿಂದ ಮುಕ್ತಿ ನೀಡುವ ಗ್ಯಾರಂಟಿಯನ್ನೂ ನಾವು ಪ್ರಾಮಾಣಿಕವಾಗಿ ಈಡೇರಿಸಿದ್ದೇವೆ ಎಂದು ಇದೇ ವೇಳೆ ನೆನಪಿಸಿದ್ದಾರೆ.