ಕಾಸರಗೋಡು: ಯುವಸಮೂಹದಲ್ಲಿ ಹೆಚ್ಚುತ್ತಿರುವ ಕೌಟುಂಬಿಕ ಸಮಸ್ಯೆಗಳ ವಿರುದ್ಧ ಆಯೋಗದ ನೇತೃತ್ವದಲ್ಲಿ ವಿವಾಹ ಪೂರ್ವ ಕೌನ್ಸೆಲಿಂಗ್ ನಡೆಸಲಾಗುತ್ತಿದೆ ಎಂದು ಕೇರಳ ಮಹಿಳಾ ಆಯೋಗ ಸದಸ್ಯೆ ವಕೀಲೆ ಕುಞËಯಿಷಾ ತಿಳಿಸಿದ್ದಾರೆ.
ಅವರು ಕಾಸರಗೋಡು ಕಲೆಕ್ಟರೇಟ್ ಸಮ್ಮೇಳನ ಸಭಾಂಗಣದಲ್ಲಿ ನಡೆದ ಅದಾಲತ್‍ನಲ್ಲಿ ಮಾತನಾಡಿದರು.
ಕಾಸರಗೋಡು ಜಿಲ್ಲೆಯ ಆಯ್ದ ಕಾಲೇಜುಗಳಲ್ಲಿ ಈ ಸಂಬಂಧ ಅಭಿಯಾನ ನಡೆಸಲಾಗುವುದು. ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ ಮಾರ್ಗದರ್ಶನ ನೀಡಲು ಮುಖಾಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯ, ಕೌಟುಂಬಿಕ ಸಮಸ್ಯೆಗಳು ಹೆಚ್ಚುತ್ತಿದ್ದು, ಅದಾಲತ್‍ಗೆ ಬರುವ ದೂರುಗಳಲ್ಲಿ ಬಹುತೇಕ ಇದೇ ಸಮಸ್ಯೆಗಳಾಗಿವೆ. ಇಂತಹ ಸಮಸ್ಯೆ ನಿವಾರಣೆಗಾಗಿ ಸ್ಥಳೀಯ ಸಂಸ್ಥೆ ಮಟ್ಟದಲ್ಲಿ ಜಾಗೃತ ಸಮಿತಿಗಳಿಗೆ ತರಬೇತಿ ನೀಡಲಾಗುತ್ತಿದೆ. ಐದು ಪಂಚಾಯಿತಿಗಳಲ್ಲಿ ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪಡನ್ನ, ತ್ರಿಕರಿಪುರ, ಕಳಳಾರ್, ಪನತ್ತಡಿ, ಮೊಗ್ರಾಲ್ ಪುತ್ತೂರು ಪಂಚಾಯಿತಿಗಳಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ನಡೆದ ಅದಾಲತ್‍ನಲ್ಲಿ 27 ದೂರುಗಳನ್ನು ಪರಿಗಣಿಸಲಾಗಿದ್ದು, ಏಳು ದೂರುಗಳಿಗೆ ಪರಿಹಾರ ಕಲ್ಪಿಸಲಾಘಿದೆ. 20 ದೂರುಗಳನ್ನು ಮುಂದಿನ ಅದಾಲತ್‍ನಲ್ಲಿ ಪರಿಗಣಿಸಲು ತೀರ್ಮಾನಿಸಲಾಯಿತು. ವಕೀಲೆ ಶೀಬಾ, ಮಹಿಳಾ ಸೆಲ್ ಸಿ.ಐ ಸೀತಾ, ಡಬ್ಲ್ಯುಸಿಪಿಒ ಜಯಶ್ರೀ, ಕೌನ್ಸಿಲರ್ ರಮ್ಯಾ, ಕೌನ್ಸಿಲ್ ನೌಕರರಾದ ಬೈಜು ಶ್ರೀಧರನ್ ಮತ್ತು ಶ್ರೀಹರಿ ಉಪಸ್ಥಿತರಿದ್ದರು.