ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವರ್ಕಾಡಿ ಗ್ರಾಮ ಪಂಚಾಯತಿ ಕ್ರೀಡಾಂಗಣದ ಅಭಿವೃದ್ಧಿಗೆ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‍ನಲ್ಲಿ 1 ಕೋಟಿ ರೂ.ಗಳ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ತಿಳಿಸಿರುವರು.
ವರ್ಕಾಡಿಯ ಧರ್ಮ ನಗರದಲ್ಲಿರುವ ಪಂಚಾಯತಿ ಕ್ರೀಡಾಂಗಣಕ್ಕೆ ಮೂಲಸೌಕರ್ಯಗಳ ಕೊರತೆಯಿರುವ ಕಾರಣ ಈ ಕ್ರೀಡಾಂಗಣವನ್ನು ಬಜೆಟ್‍ನಲ್ಲಿ ಸೇರಿಸಲು ಮತ್ತು ಗ್ರಾಮೀಣ ಭಾಗದಲ್ಲಿ ಉತ್ತಮ ಆಟದ ಮೈದಾನಗಳನ್ನು ಸಿದ್ಧಪಡಿಸಲು ಪ್ರಸ್ತಾವನೆಯನ್ನು ನೀಡಲಾಗಿತ್ತು. ಕ್ರೀಡಾಂಗಣ ಅಭಿವೃದ್ಧಿ ಯೋಜನೆಯು ಮೈದಾನ ಅಭಿವೃದ್ಧಿ, ಗ್ಯಾಲರಿ, ಸ್ಥಳ, ನೈರ್ಮಲ್ಯ ಸಂಕೀರ್ಣ, ಕಚೇರಿ ಸೌಲಭ್ಯ, ತಡೆಗೋಡೆ, ಸುತ್ತುಗೋಡೆ, ಪ್ರವೇಶದ್ವಾರ, ಕೊಳವೆಬಾವಿ, ಕ್ರೀಡಾ ಸಾಮಗ್ರಿಗಳ ಖರೀದಿ, ವಿದ್ಯುದ್ದೀಕರಣ ಮತ್ತು ಫ್ಲಡ್ ಲೈಟ್ ಅನ್ನು ಒಳಗೊಂಡಿದೆ.
ತಾಂತ್ರಿಕ ಅನುಮತಿ ಪಡೆದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಮಾಹಿತಿ ನೀಡಿರುವರು.