ತೊಡುಪುಳ: ರಾಜ್ಯಪಾಲರು ತೊಡುಪುಳದಲ್ಲಿ ಭಾಗವಹಿಸಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದೆ.
ಅಂಗಡಿಗಳನ್ನು ಮುಚ್ಚಿ ಎಲ್.ಡಿ.ಎಫ್. ಹರತಾಳಕ್ಕೆ ಸಹಕರಿಸಲಿದೆ. ಕಾಲ್ನಡಿಗೆಯಲ್ಲಿ ಆಗಮಿಸುವ ಕಾರ್ಯಕರ್ತರನ್ನು ತಡೆದರೆ ಅದನ್ನು ಬೆಂಬಲಿಸುವುದಿಲ್ಲ ಎಂದು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ತಿಳಿಸಿದೆ. ಪೋಲೀಸರಿಂದಲೂ ಭದ್ರತೆ ಕೋರಲಾಗಿದೆ ಎಂದು ಸಮಿತಿ ತಿಳಿಸಿದೆ.
ರಾಜ್ಯಪಾಲರು ಇಡುಕ್ಕಿ ಜನತೆಗೆ ಸವಾಲು ಹಾಕಲು ಬರುತ್ತಿದ್ದಾರೆ ಎಂದು ಸಿಪಿಎಂ ಹೇಳಿಕೆ ನೀಡಿತ್ತು. ರಾಜ್ಯಪಾಲರ ಆಹ್ವಾನವನ್ನು ವಿರೋಧಿಸಿ ಎಲ್‍ಡಿಎಫ್ ಹರತಾಳ ಘೋಷಿಸಿದೆ. ರಾಜ್ಯಪಾಲರು ಭೂಸುಧಾರಣೆ ಮಸೂದೆಗೆ ಅಂಕಿತ ಹಾಕದಿರುವುದನ್ನು ವಿರೋಧಿಸಿ ಎಡರಂಗದ ಇಡುಕ್ಕಿ ಜಿಲ್ಲಾ ಸಮಿತಿ ಮಂಗಳವಾರ ರಾಜಭವನ ಮೆರವಣಿಗೆ ನಡೆಸುವುದಾಗಿ ಘೋಷಿಸಿದೆ. . ರಾಜಭವನದ ಮೆರವಣಿಗೆಯ ದಿನವೇ ಇಡುಕ್ಕಿಗೆ ರಾಜ್ಯಪಾಲರು ಆಗಮಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಇಡುಕ್ಕಿ ಜಿಲ್ಲಾ ಸಮಿತಿ ನಿಲುವು ತಳೆದಿದೆ.
ಇದೇ ವೇಳೆ ರಾಜ್ಯಪಾಲರು ಇಡುಕ್ಕಿಗೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂತೋಷ್ ಕುಮಾರ್ ಹೇಳಿದ್ದಾರೆ. ಧರ್ಮಕಾರ್ಯಕ್ಕೂ ಅಡ್ಡಿಪಡಿಸುವ ಸಿಪಿಎಂನ ಅಸಹಿಷ್ಣುತೆಯನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ಸಂತೋಷ್ ಕುಮಾರ್ ಹೇಳಿದರು. ಶಬರಿಮಲೆ ಯಾತ್ರೆಯನ್ನು ತಡೆಯಲು ಎಲ್‍ಡಿಎಫ್ ಹರತಾಳ ಘೋಷಿಸಿದೆ ಎಂದು ಸಂತೋಷ್ ಕುಮಾರ್ ಆರೋಪಿಸಿದ್ದಾರೆ.