ತಿರುವನಂತಪುರ: ಇಂದಿನಿಂದ ರಾಜ್ಯದಲ್ಲಿ ಪಡಿತರ ವಿತರಣೆ ಮತ್ತು ಸಂಗ್ರಹಣೆಯಲ್ಲಿ ಮತ್ತೆ ವ್ಯತ್ಯಯ ಉಂಟಾಗಲಿದೆ. ಪಡಿತರ ಆಹಾರಧಾನ್ಯ ಸಾಗಣೆ ಗುತ್ತಿಗೆದಾರರು ಅನಿರ್ದಿಷ್ಟಾವಧಿ ಮುಷ್ಕರ ಇಂದಿನಿಂದ ಆರಂಭಿಸುತ್ತಿರುವುದು ಕಳವಳ ಮೂಡಿಸಿದೆ.
ಇಂದಿನಿಂದ ಪಡಿತರ ಸರಕು ಸಾಗಣೆ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಗುತ್ತಿಗೆದಾರರು ಮಾಹಿತಿ ನೀಡಿದ್ದಾರೆ. ಸರ್ಕಾರದಿಂದ ಬಾಕಿ ಹಣ ಪಾವತಿಯಾಗದಿರುವುದು ಮುಷ್ಕರಕ್ಕೆ ಕಾರಣವಾಗಿದೆ. ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಬಾಕಿ ಪಾವತಿಸಲು ನಿರಾಕರಿಸಿರುವÀರು. ಬಾಕಿ ಉಳಿದಿರುವುದನ್ನು ಪಾವತಿಸದೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಗುತ್ತಿಗೆದಾರರ ಸಂಘವು ತಿಳಿಸಿದೆ.