ತಿರುವನಂತಪುರ: ರಾಜ್ಯ ಸರ್ಕಾರದ ಮುಂದಿನ ಹಣಕಾಸು ವರ್ಷದ ಬಜೆಟ್ ನ್ನು ಫೆಬ್ರವರಿ ೫ ರಂದು ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಮಂಡಿಸಲಿದ್ದಾರೆ.
ಹಣಕಾಸು ಪರಿಶೀಲನಾ ವರದಿಯನ್ನು ಫೆಬ್ರವರಿ ೪ ರಂದು ವಿಧಾನಸಭೆಯ ಮೇಜಿನ ಮೇಲೆ ಇರಿಸಲಾಗುವುದು.
ಇದೇ ೨೫ರಂದು ರಾಜ್ಯಪಾಲರ ನೀತಿ ಘೋಷಣೆಯೊಂದಿಗೆ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ಮಾರ್ಚ್ ೨೭ರವರೆಗೆ ಅಧಿವೇಶನ ನಡೆಯಲಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಮಾಹಿತಿ ನೀಡಿರುವರು.
ಜನವರಿ ೨೯ ರಿಂದ ಜನವರಿ ೩೧ ರವರೆಗೆ ರಾಜ್ಯಪಾಲರ ನೀತಿ ಘೋಷಣೆ ಭಾಷಣದಕ್ಕೆ ವಂದನಾ ನಿರ್ಣಯ ಮೇಲೆ ಚರ್ಚೆ ನಡೆಯಲಿದೆ. ಫೆಬ್ರವರಿ ೧ ರಂದು ಪ್ರಾರಂಭವಾಗುವ ಅಧಿವೇಶನದಲ್ಲಿ ಬಜೆಟ್ ಮಂಡನೆ ನಂತರ ಫೆಬ್ರವರಿ ೧೨ ರಂದು ಮತ್ತೆ ಸಭೆ ಸೇರಲಿದೆ. ೧೪ ರಂದು ಬಜೆಟ್ ಮೇಲಿನ ಚರ್ಚೆ. ಫೆಬ್ರವರಿ ೧೫ ರಿಂದ ೨೫ ರವರೆಗೆ ಯಾವುದೇ ಅಧಿವೇಶನವಿಲ್ಲ. ೨೬ರಿಂದ ಬಜೆಟ್ ಮೇಲಿನ ಮತದಾನ ಸೇರಿದಂತೆ ಕಲಾಪ ಮುಂದುವರಿಯಲಿದೆ. ಮಾರ್ಚ್ ೧ರಿಂದ ೨೭ರವರೆಗೆ ವಿಧಾನಸಭೆಯಲ್ಲಿ ವಿವಿಧ ವಿಧೇಯಕಗಳನ್ನು ಮಂಡಿಸಲಾಗುವುದು.