ಕಾಸರಗೋಡು: ಪ್ರತಿಯೊಬ್ಬರಲ್ಲೂ ಸಕಾರಾತ್ಮಕತೆಯಿದೆ.ಆದರೆ ಅದನ್ನು ಉಳಿಸಿ ಬೆಳೆಸುವಲ್ಲಿ ಮಾತ್ರ ನಾವು ವಿಫಲರಾಗುತ್ತಿದ್ದೇವೆ. ಸಕಾರಾತ್ಮಕತೆಯನ್ನು ಉಳಿಸಿದರೆ ಮಾತ್ರ ನಾವು ಬೆಳೆಯಲು ಸಾಧ್ಯ" ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾದ ಪ್ರಶಾಂತ್ ಬಳ್ಳುಳ್ಳಾಯ ಹೇಳಿದರು.
ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ 'ಚಂದ್ರಗಿರಿಯ ಮಾತು' ವಿದ್ಯಾರ್ಥಿ ವೇದಿಕೆಯ ವತಿಯಿಂದ ರಾಷ್ಟ್ರೀಯ ಯುವದಿನದ ಅಂಗವಾಗಿ ಆಯೋಜಿಸಿದ 'ವಿವೇಕ ನಮನ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಶೇμÉೂೀಪನ್ಯಾಸ ನೀಡಿ ಅವರು ಮಾತನಾಡಿದರು.
ಯಾವ ಶಿಕ್ಷಣದಿಂದ ವ್ಯಕ್ತಿಯ ಆತ್ಮ ಸ್ಥೈರ್ಯ ಹೆಚ್ಚುವುದೋ ಅದುವೇ ನಿಜವಾದ ಶಿಕ್ಷಣ. ವ್ಯಕ್ತಿತ್ವದ ವಿಕಾಸ ನಮ್ಮೊಳಗಿನಿಂದ ಸಾಧ್ಯವಾಗಬೇಕು ಎಂದು ವಿವೇಕಾನಂದರ ಚಿಂತನೆಗಳನ್ನು ಪ್ರಸ್ತುತಪಡಿಸಿದರು.
ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ.ಸೌಮ್ಯಾ.ಹೆಚ್ ಅಧ್ಯಕ್ಷತೆ ವಹಿಸಿದ್ದರು. 'ಚಂದ್ರಗಿರಿಯ ಮಾತು' ವಿದ್ಯಾರ್ಥಿ ವೇದಿಕೆಯ ಸಂಯೋಜಕರಾದ ಡಾ. ಪ್ರವೀಣ ಪದ್ಯಾಣ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿವೇಕಾನಂದರ ಭಾವಚಿತ್ರಕ್ಕೆ ಪುμÁ್ಪರ್ಚನೆ ಮಾಡುವುದರ ಮೂಲಕ ಗೌರವ ನಮನ ಸಲ್ಲಿಸಲಾಯಿತು. ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಚೇತನ್ ಮುಂಡಾಜೆ, 'ಚಂದ್ರಗಿರಿಯ ಮಾತು' ವಿದ್ಯಾರ್ಥಿ ವೇದಿಕೆಯ ವಿದ್ಯಾರ್ಥಿ ಕಾರ್ಯದರ್ಶಿ ತೇಜಶ್ರೀ.ಎಂ, ವಿಭಾಗದ ಸಂಶೋಧಕ ವಿದ್ಯಾರ್ಥಿಗಳು, ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿ ವೇದಿಕೆಯ ಸಹಕಾರ್ಯದರ್ಶಿ ಸುಪ್ರೀತಾ ಮತ್ತು ತಂಡದವರು ಆಶಯ ಗೀತೆ ಹಾಡಿದರು.ವಿಭಾಗದ ವಿದ್ಯಾರ್ಥಿ ಪ್ರತಿನಿಧಿ ಸಚಿನ್ ಸ್ವಾಗತಿಸಿ, ನವ್ಯಾ ವಂದಿಸಿದರು. ಜ್ಯೋತಿರ್ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.