ಬದಿಯಡ್ಕ: ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ಬದಿಯಡ್ಕ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಯುವ ದಿನಾಚರಣೆ ಮ್ಯಾರಥಾನ್ ಶುಕ್ರವಾರ ಬೆಳಗ್ಗೆ ಜರಗಿತು.
ಬದಿಯಡ್ಕ ಪೊಲೀಸ್ ಠಾಣೆಯ ಸಮೀಪವಿರುವ ಚಿನ್ಮಯ ಶಿಶುಮಂದಿರದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಮಾನಸ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಜಗತ್ತು ಕಂಡ ಅಪ್ರತಿಮ ಸನ್ಯಾಸಿ, ಧರ್ಮದ ಜೊತೆಗೆ ದೇಶದ ಮಹತ್ವವನ್ನು ಸಾರಿದ ಶ್ರೇಷ್ಠ ಸಂತ ಸ್ವಾಮಿವಿವೇಕಾನಂದರ ಆದರ್ಶವನ್ನು ಕೋಟ್ಯಂತರ ಯುವ ಸಮುದಾಯವು ಮೈಗೂಡಿಸಿಕೊಳ್ಳಬೇಕು. ಭಾರತದ ಶ್ರೀಮಂತ ಸಂಸ್ಕøತಿಯ ಹೆಮ್ಮೆಯ ಪರಂಪರೆಯನ್ನು ವಿಶ್ವದೆಲ್ಲೆಡೆ ಅವರು ಪಸರಿಸಿದ್ದಾರೆ ಎಂದರು.
ದೈಹಿಕ ಶಿಕ್ಷಕಿ ಸೌಮ್ಯ ನೇತೃತ್ವ ನೀಡಿದ್ದರು. ಅಧ್ಯಾಪಕ ಅಧ್ಯಾಪಿಕೆಯರು ಪಾಲ್ಗೊಂಡಿದ್ದರು. ಬದಿಯಡ್ಕ ಪೇಟೆಯಲ್ಲಾಗಿ ಮ್ಯಾರಥಾನ್ ಸಾಗಿ ಪಜಿಲ ಚಿನ್ಮಯ ವಿದ್ಯಾಲಯದಲ್ಲಿ ಕೊನೆಗೊಂಡಿತು. ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು.