ಕೊಚ್ಚಿ: ಮಹಾರಾಜ ಕಾಲೇಜಿನ ಅರೇಬಿಕ್ ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿಯರು ಪೋಲೀಸರಿಗೆ ದೂರು ನೀಡಿದ್ದಾರೆ. ಅರೇಬಿಕ್ ಶಿಕ್ಷಕ ಡಾ. ಕೆ.ಎಂ.ನಿಜಾಮುದ್ದೀನ್ ವಿರುದ್ದ ಸುಮಾರು 10 ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ. ಜನಾಂಗೀಯ ನಿಂದನೆ ಹಾಗೂ ರಾತ್ರಿ ಪೋನ್ ಕರೆಗಳ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿನಿಯರು ಎರ್ನಾಕುಳಂ ಸೆಂಟ್ರಲ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜನವರಿ 15 ರಂದು ಅರೇಬಿಕ್ ವಿಭಾಗದಲ್ಲಿ ವಿದ್ಯಾರ್ಥಿಗಳ ಘಷಣೆಯ ನಂತರ ತೊಂದರೆ ಪ್ರಾರಂಭವಾಯಿತು. ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪಕ್ಷಪಾತ ಧೋರಣೆ ತೋರಿರುವುದೇ ಬೆದರಿಕೆಗೆ ಕಾರಣ ಎನ್ನುತ್ತಾರೆ ವಿದ್ಯಾರ್ಥಿಗಳು. 'ನನ್ನ ನಿರ್ಧಾರ ಪ್ರಶ್ನಿಸಲು ನೀವು ಯಾರು' ಎಂದು ಪೋನ್ ನಲ್ಲಿ ನಿಂದಿಸಿದ್ದಾರೆ. ದೂರಿನ ಪ್ರಕಾರ ಮೂರು ತಿಂಗಳ ಕಾಲ ಕಾಲೇಜಿನಿಂದ ಅಮಾನತು ಮಾಡುವುದಾಗಿ ಶಿಕ್ಷಕರು ಬೆದರಿಕೆ ಕೂಡಾ ಹಾಕಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿಗಳು ಕಾಲೇಜು ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ಆದರೆ ಈ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪೋಲೀಸರಿಗೆ ದೂರು ನೀಡಿದ್ದಾರೆ. ಘಟನೆಯಿಂದಾಗಿ ಅರೇಬಿಕ್ ವಿಭಾಗದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದಾರೆ. ದೂರಿನ ಕುರಿತು ತನಿಖಾ ಸಮಿತಿಯ ವರದಿ ನಮಗೆ ಬಂದಿಲ್ಲ ಎಂದು ಕಾಲೇಜು ಅಧಿಕಾರಿಗಳು ವಿವರಿಸಿದರು. ಇದೇ ವೇಳೆ ವಿದ್ಯಾರ್ಥಿಗಳು ದೂರವಾಣಿ ಮೂಲಕ ವಿದ್ಯಾರ್ಥಿಗೆ ಬೆದರಿಕೆ ಹಾಕಿರುವ ಧ್ವನಿಮುದ್ರಿಕೆಯನ್ನು ಬಿಡುಗಡೆ ಮಾಡಿದರು.
ಮೊದಲಿನಿಂದಲೂ ನಿಜಾಮುದ್ದೀನ್ ವಿದ್ಯಾರ್ಥಿಗಳನ್ನು ರಾಜಕೀಯ ದ್ವೇಷದಿಂದ ನಡೆಸಿಕೊಂಡು ಬರುತ್ತಿದ್ದಾರೆ. ತರಗತಿಗಳಲ್ಲಿಯೂ ನಿಜಾಮುದ್ದೀನ್ ಜನಾಂಗೀಯ ನಿಂದನೆ ಮಾಡುತ್ತಾನೆ. ಆಗಾಗ್ಗೆ ಮಾನಸಿಕ ಒತ್ತಡದಿಂದಾಗಿ ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ.