ಕಾಸರಗೋಡು: ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ದಿ ಪ್ರಾಧಿಕಾರ ನೇತೃತ್ವದಲ್ಲಿ ಗಡಿಯಾಚೆ ಸಾಧನೆಗೈದ ಪ್ರತಿಭಾನ್ವಿತ ಕನ್ನಡ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮರಂಭ ನಾಳೆ(ಸೋಮವಾರ)ಅಪರಾಹ್ನ 2 ರಿಂದ ಶ್ರೀಮದ್ ಎಡನೀರು ಮಠದ ಸಭಾಂಗಣದಲ್ಲಿ ಆಯೋಜಿಸಿದೆ.
ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಉಪಸ್ಥಿತಿಯಲ್ಲಿ ನಡೆಯಲಿರುವ ಸಮಾರಂಭವನ್ನು ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್. ತಂಗಡಗಿ ಉದ್ಘಾಟಿಸಿ ಪ್ರಶಸ್ತಿಪ್ರದಾನ ಮಾಡುವರು. ಕಾಸರಗೋಡು ಜಿ.ಪಂ.ಅಧ್ಯಕ್ಷೆ ನ್ಯಾಯವಾದಿ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ವಿಶೇಷ ಅತಿಥಿಗಳಾಗಿ ಉಪಸ್ಥಿತರಿರುವರು. ಉದುಮ ಶಾಸಕ ನ್ಯಾಯವಾದಿ ಸಿ.ಎಚ್ ಕುಂಞಂಬು ಮುಖ್ಯ ಅತಿಥಿಗಳಾಗಿರುವರು. ಕಾಸರಗೋಡು ಜಿ.ಪಂ.ಸದಸ್ಯ ಶೈಲಜಾ ಭಟ್, ಚೆಂಗಳ ಗ್ರಾ.ಪಂ.ಅಧ್ಯಕ್ಷ ಖಾದರ್ ಬದ್ರಿಯಾ ಉಪಸ್ಥಿತರಿರುವರು. ಹಿರಿಯ ಸಾಹಿತಿ ಪ್ರೊ. ಜಿ.ಎಸ್.ಸಿದ್ದರಾಮಯ್ಯ ಹಿತನುಡಿಯುವರು. ಜಿಲ್ಲಾಧಿಕಾರಿ ಇನ್ಬಾಶೇಖರ್, ಜಿಲ್ಲಾ ಪೋಲೀಸ್ ವರಿಷ್ಠ ಬಿಜೋಯ್ ಗೌರವ ಉಪಸ್ಥಿತರಿರುವರು. ನ್ಯಾಯವಾದಿ ಸುಬ್ಬಯ್ಯ ರೈ, ಡಾ.ಮಲ್ಲಿಕಾರ್ಜುನ ಎಸ್ ನಾಸಿ, ಡಿ.ಶ್ರೀನಿವಾಸ ರಾವ್, ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ರವಿ ನಾಯ್ಕಾಪು, ಪಿ.ಬಿ.ಶ್ರೀನಿವಾಸ ರಾವ್, ಡಾ.ಸುಜಾತಾ ಎಸ್ ಮೊದಲಾದವರು ಉಪಸ್ಥಿತರಿರುವರು.