ಬದಿಯಡ್ಕ: ಇತ್ತೀಚಿಗೆ ಕೊಲ್ಲಂನಲ್ಲಿ ಜರಗಿದ ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಅನ್ವಿತಾ ಟಿ ಹೈಸ್ಕೂಲ್ ವಿಭಾಗದ ಶಾಸ್ತ್ರೀಯ ಸಂಗೀತ, ಕನ್ನಡ ಕಂಠಪಾಠ, ಗಾನಾಲಾಪನಂ ನಲ್ಲಿ ಎ' ಗ್ರೇಡ್ ಮತ್ತು ವಯಲಿನ್ ನಲ್ಲಿ 'ಬಿ' ಗ್ರೇಡ್, ಅನಿರುದ್ಧ ಕೆ ಎನ್ ಹೈಸ್ಕೂಲ್ ವಿಭಾಗದ ಸಂಸ್ಕøತ ಸಮಸ್ಯಾಪೂರಣಂ, ಸಂಸ್ಕøತ ಉಪನ್ಯಾಸ ರಚನೆ, ಸಂಸ್ಕøತ ಭಾಷಣದಲ್ಲಿ ಎ' ಗ್ರೇಡ್, ಶಮಾ ವಿ ಎಮ್ ಹೈಸ್ಕೂಲ್ ವಿಭಾಗದ ಸಂಸ್ಕøತ ಕಥಾರಚನೆಯಲ್ಲಿ ಎ' ಗ್ರೇಡ್, ಭಾವನಾ ನಾಯಕ್ ಹೈಸ್ಕೂಲ್ ವಿಭಾಗದ ಹಿಂದಿ ಭಾಷಣ, ಹಿಂದಿ ಉಪನ್ಯಾಸ ರಚನೆ ಸ್ಪರ್ಧೆಯಲ್ಲಿ ಎ' ಗ್ರೇಡ್ ಪಡೆದಿದ್ದಾರೆ. ಈ ಮೂಲಕ ಪ್ರೌಢಶಾಲಾ ವಿಭಾಗದ ಸಂಸ್ಕøತ ಸ್ಪರ್ಧೆಗಳಲ್ಲಿ ಶಾಲೆಯು ರಾಜ್ಯ ಮಟ್ಟದಲ್ಲಿ ಆರನೇ ಸ್ಥಾನ ಪಡೆದಿದೆ.
ಈ ನಾಲ್ಕೂ ಮಂದಿ ವಿದ್ಯಾರ್ಥಿಗಳು ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇವರನ್ನು ಶಾಲಾ ಆಡಳಿತ ಮಂಡಳಿ, ರಕ್ಷಕ ಶಿಕ್ಷಕ ಸಂಘ, ಮುಖ್ಯೋಪಾಧ್ಯಾಯರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ ಅಭಿನಂದಿಸಿದೆ.